ಬೆಂಗಳೂರು:ನಗರದಲ್ಲಿ ಇಂದು 2035 ಮಂದಿಗೆ ಕೊರೊನಾ ಸೋಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 63,033ಕ್ಕೆ ಏರಿದೆ. ಗುಣಮುಖರಾಗುತ್ತಿರುವ ಅಂಕಿ-ಅಂಶವನ್ನೂ ಕಲೆ ಹಾಕಲಾಗುತ್ತಿದೆ. ಆಸ್ಪತ್ರೆ ಡಿಸ್ಚಾರ್ಜ್ ಅಲ್ಲದೆ ಹೋಮ್ ಐಸೋಲೇಶನ್ ಸೇರಿ ಒಟ್ಟು 4274 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 27,877 ಮಂದಿ ಡಿಸ್ಚಾರ್ಜ್ ಆಗಿದ್ದು, 34,021 ಸಕ್ರಿಯ ಪ್ರಕರಣಗಳಿವೆ. ಇಂದು 30 ಮಂದಿ ಮೃತಪಟ್ಟಿದ್ದು, ಈವರೆಗೆ 1134 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.
ನಗರಕ್ಕೆ 2725 ಶುಶ್ರೂಷಕರ ಕೊರತೆ :ನಗರದಲ್ಲಿ ಈವರೆಗೆ 59,501 ದೃಢೀಕೃತ ಕೋವಿಡ್ ಪ್ರಕರಣ ವರದಿಯಾಗಿವೆ. ಮಾನವ ಸಂಪನ್ಮೂಲ ಕೊರತೆಯಿಂದ ಸೋಂಕಿನ ನಿಯಂತ್ರಣ, ಸಂಪರ್ಕ ಪತ್ತೆಹಚ್ಚುವಿಕೆ, ಕಂಟೇನ್ಮೆಂಟ್ ವಲಯದ ಸಮೀಕ್ಷೆ, ಗಂಟಲು ದ್ರವ ಪರೀಕ್ಷೆ ಜೊತೆಗೆ ಇನ್ನಿತರೆ ಚಟುವಟಿಕೆ ಮತ್ತು ಹಲವಾರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ನಿರ್ವಹಿಸಲು ಕಷ್ಟವಾಗಿದೆ.