ಬೆಂಗಳೂರು:ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಬೆಂಗಳೂರು ನಗರದಲ್ಲಿ 24 ಗಂಟೆಯಲ್ಲಿ ಸುಮಾರು 22,534 ಮಂದಿಗೆ ಕೋವಿಡ್ ಪ್ರಕರಣ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ಪೂರ್ವ ವಲಯದಲ್ಲಿ 3,278, ದಕ್ಷಿಣ ವಲಯದಲ್ಲಿ 4,133, ಬೊಮ್ಮನಹಳ್ಳಿಯಲ್ಲಿ 2,148, ದಾಸರಹಳ್ಳಿಯಲ್ಲಿ 690, ಮಹದೇವಪುರದಲ್ಲಿ 2,285, ಆರ್.ಆರ್ ನಗರದಲ್ಲಿ 1,602, ಪಶ್ಚಿಮ ವಲಯದಲ್ಲಿ 2,445, ಹಾಗೂ ಬೆಂಗಳೂರು ಹೊರವಲಯದಲ್ಲಿ 2,715 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.