ಬೆಂಗಳೂರು:ಹೊಸ ವರ್ಷಾಚರಣೆಗೆ ಇನ್ನೆರಡು ದಿನಗಳು ಮಾತ್ರ ಬಾಕಿಯಿದೆ. ನಗರದ ಪ್ರತಿಷ್ಠಿತ ಪ್ರದೇಶಗಳಾದ ಎಂ.ಜಿ.ರಸ್ತೆ ಹಾಗೂ ಬಿಗ್ರೇಡ್ ರಸ್ತೆಯಲ್ಲಿ ಹೊಸ ವರ್ಷ ಆಚರಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.
ಹೊಸ ವರ್ಷಾಚರಣೆಗೆ ದಯಮಾಡಿ ನಮ್ಮನ್ನು ಕರಿಬೇಡಿ ಎಂದ ಬೆಂಗಳೂರು ಪೊಲೀಸರು!
ಸಾರ್ವಜನಿಕರ ಹಿತದೃಷ್ಟಿಯಿಂದ ಹೊಸ ವರ್ಷಕ್ಕೆ ಪಾರ್ಟಿ ಮಾಡುವವರಿಗೆ ಸಿಲಿಕಾನ್ ಸಿಟಿ ಪೊಲೀಸರು ಕಿವಿಮಾತು ಹೇಳಿದ್ದಾರೆ. ಅದೇನೆಂದರೆ ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡುವವರು ಮಾಡಿ. ಆದರೆ ನಿಮ್ಮ ಪಾರ್ಟಿಗೆ ನಮ್ಮನ್ನು ಮಾತ್ರ ಕರೀಬೇಡಿ. ಯಾರಿಗೂ ತೊಂದರೆಯಾಗದಂತೆ ನೀವೂ ಸಹ ಕಾನೂನುಬದ್ಧವಾಗಿ ಹೊಸ ವರ್ಷಾಚರಣೆ ಮಾಡಿ ಎಂದು ಸಲಹೆ ನೀಡಿದ್ದಾರೆ. ನಾವು ಬರುವಂತಹ ಅವಕಾಶಗಳನ್ನು ಕೊಡಬೇಡಿ ಎಂದು ಟ್ವಿಟ್ಟರ್ನಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಪಾರ್ಟಿ ಮಾಡುವವರಿಗೆ ಸಿಲಿಕಾನ್ ಸಿಟಿ ಪೊಲೀಸರು ಕಿವಿಮಾತು ಹೇಳಿದ್ದಾರೆ. ಅದೇನೆಂದರೆ ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡುವವರು ಮಾಡಿ. ಆದರೆ ನಿಮ್ಮ ಪಾರ್ಟಿಗೆ ನಮ್ಮನ್ನು ಮಾತ್ರ ಕರೀಬೇಡಿ. ಯಾರಿಗೂ ತೊಂದರೆಯಾಗದಂತೆ ನೀವೂ ಸಹ ಕಾನೂನುಬದ್ಧವಾಗಿ ಹೊಸ ವರ್ಷಾಚರಣೆ ಮಾಡಿ ಎಂದು ಸಲಹೆ ನೀಡಿದ್ದಾರೆ. ನಾವು ಬರುವಂತಹ ಅವಕಾಶಗಳನ್ನು ಕೊಡಬೇಡಿ ಎಂದು ಟ್ವಿಟ್ಟರ್ನಲ್ಲಿ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರದ ಎಂ ಜಿ ರಸ್ತೆ, ಬಿಗ್ರೇಡ್ ರೋಡ್, ಇಂದಿರಾ ನಗರ, ಕೋರಮಂಗಲ ಸೇರಿದಂತೆ ನಗರ ವಿವಿಧ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜಿಸಲಾಗುತ್ತಿದೆ.