ಕರ್ನಾಟಕ

karnataka

ETV Bharat / city

ಹೊಸ ವರ್ಷ ಹಿನ್ನೆಲೆ : ಡ್ರಗ್ಸ್ ಚಟುವಟಿಕೆ ನಡೆಸಿದರೆ ಪಾರ್ಟಿ ಆಯೋಜಕರ ವಿರುದ್ಧ ಕ್ರಿಮಿನಲ್‌ ಕೇಸ್ - ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ

ಹೊಸ ವರ್ಷದ ಪಾರ್ಟಿಗಳ ಮೇಲೆ ಕಣ್ಣಿಟ್ಟಿದ್ದ ಪೆಡ್ಲರ್​ಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು, ಒಂದು ವಾರದಿಂದ ನಗರದಲ್ಲಿ ಸುಮಾರು 10ಕ್ಕೂ ಹೆಚ್ಚು ವಿದೇಶಿ ಪೆಡ್ಲರ್​ಗಳನ್ನು ಅರೆಸ್ಟ್ ಮಾಡಿದ್ದಾರೆ..

bangalore-city-police
ಬೆಂಗಳೂರು ನಗರದ ಪೊಲೀಸ್​

By

Published : Dec 24, 2021, 9:34 AM IST

ಬೆಂಗಳೂರು :ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆ ಅಲರ್ಟ್ ಆಗಿರುವ‌ ಪೊಲೀಸರು, ನಗರದ ಎಲ್ಲಾ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ನಡೆಸಿದ್ದಾರೆ.

ನ್ಯೂ ಇಯರ್‌ನಲ್ಲಿ ವೇಳೆ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಅಲ್ಲದೆ, ಆಯಾ ವಿಭಾಗದ ಡಿಸಿಪಿಗಳು ಸ್ಥಳೀಯ ಶಾಪ್ ಮಾಲೀಕರ ಜೊತೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.

ಪಾರ್ಟಿ ಹೆಸರಲ್ಲಿ ಡ್ರಗ್ಸ್ ಸೇವನೆ ಮಾಡಿದ್ರೆ ಕ್ರಿಮಿನಲ್ ಕೇಸ್ ಹಾಕಲಾಗುವುದು. ಜೊತೆಗೆ ಪಬ್, ಬಾರ್ ಅಂಡ್ ರೆಸ್ಟೊರೆಂಟ್ ಲೈಸೆನ್ಸ್ ರದ್ದುಗೊಳಿಸಲಾಗುವುದು. ಮಾದಕವಸ್ತು ಮಾರಾಟ ಹಾಗೂ ಸೇವನೆ ಕಂಡು ಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಹೊಸ ವರ್ಷದ ಪಾರ್ಟಿಗಳ ಮೇಲೆ ಕಣ್ಣಿಟ್ಟಿದ್ದ ಪೆಡ್ಲರ್​ಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು, ಒಂದು ವಾರದಿಂದ ನಗರದಲ್ಲಿ ಸುಮಾರು 10ಕ್ಕೂ ಹೆಚ್ಚು ವಿದೇಶಿ ಪೆಡ್ಲರ್​ಗಳನ್ನು ಅರೆಸ್ಟ್ ಮಾಡಿದ್ದಾರೆ.

ಡ್ರಗ್ಸ್​​​ ಪತ್ತೆಗೆ ವಿಶೇಷ ತಂಡ ರಚನೆ : ಡ್ರಗ್ಸ್​ ಪೆಡ್ಲರ್ಸ್​​​​​ ಪೊಲೀಸರನ್ನು ಯಾಮಾರಿಸೋಕೆ ಡಿಫರೆಂಟ್ ಫ್ಲಾನ್ ಮಾಡಿದ್ದಾರೆ. ಹಾಲಿನ ಪೌಡರ್, ರಂಗೋಲಿ ಡಬ್ಬ, ಐಸ್ ಕ್ರೀಂ ಡಬ್ಬಗಳಲ್ಲಿ ಮಾದಕ ವಸ್ತು ಇಟ್ಟು ಪಾರ್ಸಲ್​ನಲ್ಲಿ ಮಾಡಿದ್ದಾರೆ.

ಸಾಕಷ್ಟು ಪ್ರಮಾಣದ ಡ್ರಗ್ಸ್ ಈಗಾಗಲೇ ನಗರಕ್ಕೆ ಎಂಟ್ರಿ‌ ಕೊಟ್ಟಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ‌. ಡಿಸಿಪಿಗಳ ನೇತೃತ್ವದಲ್ಲಿ ವಿಶೇಷ ತಂಡಗಳಿಂದ ನಿಗಾವಹಿಸುವಂತೆ ಸೂಚಿಸಲಾಗಿದೆ‌. ಪ್ರತಿ ವಿಭಾಗದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ‌.

ABOUT THE AUTHOR

...view details