ಬೆಂಗಳೂರು: ರಾಜ್ಯ ರಾಜಧಾನಿ ಕೋವಿಡ್ ರಾಜಧಾನಿಯಾಗುವಂತಿದ್ದು, ಇಂದು ಒಂದೇ ದಿನ ಬರೋಬ್ಬರಿ 1373 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಬೆಂಗಳೂರಲ್ಲಿ ಇಂದು ಒಂದೇ ದಿನ 1,373 ಕೊರೊನಾ ಕೇಸ್ ಪತ್ತೆ! - ಕರ್ನಾಟಕ ಕೊರೊನಾ ವೈರಸ್ ವರದಿ
ಮಹಾನಗರಕ್ಕೆ ಕೊರೊನಾ ಕರಿ ನೆರಳು ಆವರಿಸುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹಚ್ಚಾಗುತ್ತಲೇ ಇದೆ. ಇಂದು 1373 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದು, ರಾಜಧಾನಿಯ ಸೋಂಕಿತರ ಸಂಖ್ಯೆ 13,882ಕ್ಕೆ ಏರಿದೆ.

ಬೆಂಗಳೂರು ಕೊರೊನಾ ಪ್ರಕರಣಗಳು
ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,882ಕ್ಕೆ ಏರಿಕೆಯಾಗಿದೆ. ಇಂದು 606 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 2834 ಮಂದಿ ಗುಣಮುಖರಾಗಿದ್ದಾರೆ. 10,870 ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ಇಂದು ಮರಣ ಸಂಭವಿಸಿರುವ ಬಗ್ಗೆ ಹೆಲ್ತ್ ಬುಲೆಟಿನ್ನಲ್ಲಿ ವರದಿಯಾಗಿಲ್ಲ. ಈವರೆಗೆ 177 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ.