ಕರ್ನಾಟಕ

karnataka

ETV Bharat / city

ಬೆಂಗಳೂರಿನಲ್ಲಿ ಲೈವ್ ಬ್ಯಾಂಡ್ ಮೇಲೆ ಸಿಸಿಬಿ ದಾಳಿ... 17 ಮಂದಿ ಅಂದರ್​ - kannada newspaper

ಸಿಲಿಕಾನ್ ಸಿಟಿಯಲ್ಲಿ ಲೈವ್ ಬ್ಯಾಂಡ್ ದಂಧೆ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ತಂಡ ಬಾರ್ ಮಾಲೀಕ, ನಾಲ್ಕು ಮಂದಿ ಮ್ಯಾನೇಜರ್​ಗಳು ಹಾಗೂ 13 ಮಂದಿ ಗ್ರಾಹಕರನ್ನು ಬಂಧಿಸಿದ್ದಾರೆ.

ಸಿಸಿಬಿ

By

Published : Mar 23, 2019, 6:44 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಆರೆಂಜ್ ಲೈವ್ ಬ್ಯಾಂಡ್ ಮೇಲೆ ದಾಳಿ ನಡೆಸಿ 17 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ಶ್ರೀನಿವಾಸ್ ಬಾರ್ ಅಂಡ್ ರೆಸ್ಟೋರೆಂಟ್ ಹೆಸರಲ್ಲಿಕಾನೂನು ಬಾಹಿರವಾಗಿ ಲೈವ್ ಬ್ಯಾಂಡ್ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ತಂಡ ಬಾರ್ ಮಾಲೀಕ ಸಂತೋಷ್, ನಾಲ್ಕು ಮಂದಿ ಮ್ಯಾನೇಜರ್​ಗಳು ಹಾಗೂ 13 ಮಂದಿ ಗ್ರಾಹಕರನ್ನು ಬಂಧಿಸಿದ್ದಾರೆ.

ಲೈವ್ ಬ್ಯಾಂಡ್​ನಲ್ಲಿ ದೆಹಲಿ, ಪಂಜಾಬ್ ನಿಂದ ಯುವತಿಯರನ್ನು ಕರೆತಂದು ಅಶ್ಲೀಲವಾಗಿ ನೃತ್ಯ ಮಾಡಿಸುವ ದಂಧೆ ಬೆಳಕಿಗೆ ಬಂದಿದೆ. ಈ ವೇಳೆ ಲೈವ್ ಬ್ಯಾಂಡ್ ನಲ್ಲಿದ್ದ 10 ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಬಂಧಿತರಿಂದ 1.30 ಲಕ್ಷ ಹಣ ,19 ಮೊಬೈಲ್ ಜಪ್ತಿ‌ ಮಾಡಿಕೊಳ್ಳಲಾಗಿದೆ.‌ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details