ಕರ್ನಾಟಕ

karnataka

ETV Bharat / city

ಅಮೇಜಾನ್ ಗೋಡೌನ್ ಕಳ್ಳತನ ಪ್ರಕರಣ: ಲಾಕರ್ ಟ್ರೇಸ್ ಮಾಡಿದ 'ಲಕ್ಷ್ಮಿ' - ಬೆಂಗಳೂರು ಅಮೇಜಾನ್ ಗೋಡೌನ್ ಕಳ್ಳತನ

ಜುಲೈ 17ರ ತಡರಾತ್ರಿ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿನ ಅಮೇಜಾನ್​ ಗೋಡೌನ್​ ಕಳ್ಳತನ ಮಾಡಲಾಗಿತ್ತು. ಇಂದು ಡಾಗ್​​ ಸ್ಕ್ವಾಡ್​​ನಿಂದ ಲಾಕರ್​​ ಟ್ರೇಸ್​​ ಮಾಡಲಾಗಿದೆ.

bangalore-amazon-godown-theft-case
ಅಮೇಜಾನ್ ಗೋಡೌನ್ ಕಳ್ಳತನ

By

Published : Jul 24, 2021, 10:25 PM IST

ಬೆಂಗಳೂರು: ನಗರದ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿನ ಅಮೇಜಾನ್ ಗೋಡೌನ್​ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ದ ಲಾಕರ್​ನ್ನು ಇಂದು ಡಾಗ್ ಸ್ಕ್ವಾಡ್​ನಿಂದ ಟ್ರೇಸ್ ಮಾಡಲಾಗಿದೆ.

ಜುಲೈ 17ರ ತಡರಾತ್ರಿ ಗೋಡನ್​ಗೆ ಕನ್ನ ಹಾಕಿದ್ದ ಕಳ್ಳರು, 10 ಲಕ್ಷ ರೂ. ತುಂಬಿದ್ದ ಲಾಕರ್ ಹೊತ್ತೊಯ್ದಿದ್ದರು. ಲಾಕರ್ ಓಪನ್ ಮಾಡಲು ಆಗದೆ ಪರದಾಡಿದ್ದ ಕಳ್ಳರು, ಗೋಡೌನ್​ನ 500 ಮೀಟರ್ ದೂರದ ಪೊದೆಯೊಂದರಲ್ಲಿ ಎಸೆದು ಪರಾರಿಯಾಗಿದ್ದರು.

ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸ್ಥಳಕ್ಕೆ ಬಂದ ಶ್ವಾನ ಲಕ್ಷ್ಮೀ, ಇನ್ಟ್ಯಾಕ್ಟ್ ಪ್ರಾಪರ್ಟಿ ರಿಕವರಿ ಮಾಡಲಾಗಿದೆ.

ABOUT THE AUTHOR

...view details