ಕರ್ನಾಟಕ

karnataka

ETV Bharat / city

ಪ್ರೇಮಿಗಳ ದಿನದ ಆಚರಣೆಗಾಗಿ ಕೆಐಎಎಲ್​ನಿಂದ 5.15 ಲಕ್ಷ ಕೆಜಿ ಗುಲಾಬಿ ರಫ್ತು!

ಪ್ರೇಮಿಗಳ ದಿನದ ಆಚರಣೆಗಾಗಿ ಕೆಐಎಎಲ್​ನಿಂದ ಸುಮಾರು 5.15 ಲಕ್ಷ ಕೆಜಿ ಗುಲಾಬಿ ರಫ್ತುಮಾಡಲಾಗಿದೆ.

Bangalore airport celebrates season of love, more than lakh kg rose shipment from Bengaluru airport, valentines day, valentines day news, ಬೆಂಗಳೂರು ಏರ್​​ಪೋರ್ಟ್​ನಿಂದ ಗುಲಾಬಿ ರಫ್ತು, ಲಕ್ಷಕ್ಕೂ ಹೆಚ್ಚು ಕೆಜಿ ಗುಲಾಬಿ ರಫ್ತು, ಪ್ರೇಮಿಗಳ ದಿನ, ಪ್ರೇಮಿಗಳ ದಿನ ಸುದ್ದಿ,
ಕೆಐಎಎಲ್ ನಿಂದ 5.15 ಲಕ್ಷ ಕೆಜಿ ಗುಲಾಬಿ ರಫ್ತ

By

Published : Feb 15, 2022, 5:25 AM IST

ದೇವನಹಳ್ಳಿ : ಭಾರತದಲ್ಲಿ ಅತಿಹೆಚ್ಚು ಗುಲಾಬಿ ರಫ್ತು ಮಾಡುವ ಹೆಗ್ಗಳಿಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಡುದುಕೊಂಡಿದೆ. ಈ ಬಾರಿಯ ಪ್ರೇಮಿಗಳ ದಿನದ ಆಚರಣೆಗಾಗಿ ಕೆಐಎಎಲ್​ನಿಂದ ಪ್ರಪಂಚದ 25 ಸ್ಥಳಗಳಿಗೆ 18 ಏರ್​ಲೈನ್ಸ್​ನಿಂದ 5.15 ಲಕ್ಷ ಕೆಜಿ ಗುಲಾಬಿ ಹೂವು ರಫ್ತು ಮಾಡಲಾಗಿದೆ.

ಬೆಂಗಳೂರು ಸುತ್ತಮುತ್ತ ಪ್ರದೇಶದಲ್ಲಿ ಅತಿ ಹೆಚ್ಚು ಗುಲಾಬಿ ಬೆಳೆಯಲಾಗುತ್ತದೆ. ಅಂತರಾಷ್ಟ್ರೀಯ ಗುಣಮಟ್ಟದ ಗುಲಾಬಿಯನ್ನ ಸ್ಥಳೀಯ ರೈತರು ಬೆಳೆಯುತ್ತಿದ್ದಾರೆ. ರೈತರಿಗೆ ಮಾರುಕಟ್ಟೆ ವಿಸ್ತಾರವನ್ನು ಮಾಡಿರುವ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವರ್ಷದಿಂದ ವರ್ಷಕ್ಕೆ ಗುಲಾಬಿ ಹೂವು ರಫ್ತು ಪ್ರಮಾಣವನ್ನು ಹೆಚ್ಚು ಮಾಡುತ್ತಲೆ ಬಂದಿದೆ.

ಓದಿ:32 ವರ್ಷಗಳಿಂದ ಹೆಂಡತಿಯ ಚಿತಾಭಸ್ಮದೊಂದಿಗೆ ಬದುಕುತ್ತಿರುವ ಭೋಲಾನಾಥ್.. ಕಾರಣ?

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಾದ ಸಿಂಗಾಪುರ, ಕೌಲಾಲಂಪುರ್, ಲಂಡನ್, ಆಂಸ್ಟರ್‌ಡ್ಯಾಮ್, ಕುವೈತ್, ಆಕ್ಲೆಂಡ್, ಬೈರುತ್, ಮನಿಲಾ, ಮಸ್ಕತ್ ಮತ್ತು ದುಬೈಗೆ ಗುಲಾಬಿ ರಫ್ತಾಗುತ್ತಿದೆ, ಈ ವರ್ಷ ವಿದೇಶಿ ಮಾರುಕಟ್ಟೆ 2 ಲಕ್ಷ ಕೆಜಿಯ 7.3 ಮಿಲಿಯನ್ ಗುಲಾಬಿ ಹೂವು ಕೆಐಎಎಲ್ ನಿಂದ ರಫ್ತು ಮಾಡಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶಿ ಮಾರುಕಟ್ಟೆ ಸ್ಥಳಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಗುವಾಹಟಿ ಮತ್ತು ಚಂಡೀಗಢ ಗುಲಾಬಿ ಹೂವು ರಫ್ತು ಮಾಡಲಾಗಿದೆ. ಈ ವರ್ಷ 3.15 ಲಕ್ಷ ಕೆಜಿಯ 6.5 ಮಿಲಿಯನ್ ಗುಲಾಬಿ ಹೂವು ದೇಶಿ ಮಾರುಕಟ್ಟೆಗೆ ರಫ್ತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details