ಕರ್ನಾಟಕ

karnataka

ETV Bharat / city

ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ : ತಿರುವಣ್ಣಾಮಲೈನಲ್ಲಿ ಪೊಲೀಸರಿಂದ ಸ್ಥಳ ಮಹಜರು - ತಿರುವಣ್ಣಾಮಲೈನಲ್ಲಿ ಪೊಲೀಸರಿಂದ ಸ್ಥಳ ಮಹಜರು

ಆ್ಯಸಿಡ್ ದಾಳಿ ಮಾಡಿ ಬಂಧಿತನಾಗಿದ್ದ ನಾಗನನ್ನು ಪೊಲೀಸರು ಇಂದು ತಿರುವಣ್ಣಾಮಲೈಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ..

bengalore Acid attack on young woman case
ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ

By

Published : Jun 5, 2022, 4:50 PM IST

ಬೆಂಗಳೂರು :ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ಆ್ಯಸಿಡ್ ಎರಚಿ ತಮಿಳನಾಡಿನಲ್ಲಿ ತಿರುವಣ್ಣಾಮಲೈನ ರಮಣಶ್ರೀ ಆಶ್ರಮದಲ್ಲಿ ಮಾರುವೇಶದಲ್ಲಿ ಪಾಪಿ ನಾಗೇಶ ತಲೆಮರೆಸಿಕೊಂಡಿದ್ದ. ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿ ಎಳೆ ತಂದಿದ್ದ ಪೊಲೀಸರು ಈಗ ನಾಗನನ್ನು ತಿರುವಣ್ಣಾಮಲೈಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ.

ಆ್ಯಸಿಡ್ ಎರಚಿ ಪರಾರಿಯಾಗಿದ್ದ ನಾಗನ ಹೇಳಿಕೆ ಆಧಾರದ ಮೇಲೆ ಆ್ಯಸಿಡ್ ಎರಚಿದ್ದಕ್ಕೆ ಯಾವುದೇ ಕುರುಹುಗಳು ಸಿಗಬಾರದು ಅಂತಾ ಸಾಕ್ಷಿ ನಾಶಕ್ಕೆ ಮುಂದಾಗಿದ್ದ. ಹೀಗಾಗಿ, ಆಶ್ರಮದಲ್ಲಿದ್ದ ವ್ಯಕ್ತಿಯೊಬ್ಬನ ಸಹಾಯದಿಂದ ಆ್ಯಸಿಡ್ ಎರಚುವಾಗ ಧರಿಸಿದ್ದ ಗ್ಲೌಸ್ ಹಾಗೂ ಬಟ್ಟೆಯನ್ನ ನಿರ್ಜನ ಪ್ರದೇಶದಲ್ಲಿ ಸುಟ್ಟಿದ್ದ.

ಹೀಗಾಗಿ, ಕಾಮಾಕ್ಷಿಪಾಳ್ಯ ಪೊಲೀಸರು ನಿನ್ನೆ ಆ್ಯಂಬುಲೆನ್ಸ್​ನಲ್ಲಿ ಆರೋಪಿ ನಾಗನನ್ನು ತಿರುವಣ್ಣಾಮಲೈಗೆ ಕರೆದೊಯ್ದು ಸಾಕ್ಷಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ನಾಗನಿಗೆ ಸಹಾಯ ಮಾಡಿದ್ದ ವ್ಯಕ್ತಿಯ ಪತ್ತೆಗೂ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಹೊಸ ಕಮಿಟಿ ಮಾಡಿ ಅಗತ್ಯ ಇದ್ದರೆ ಪಠ್ಯಕ್ರಮ ಪರಿಷ್ಕರಣೆ ಮಾಡಬೇಕು : ವಿಪಕ್ಷ ನಾಯಕ ಸಿದ್ದರಾಮಯ್ಯ

ABOUT THE AUTHOR

...view details