ಕರ್ನಾಟಕ

karnataka

ETV Bharat / city

ಬೆಂಗಳೂರಿನ ಆಗಮಿಸಿದ ಲಕ್ಷ್ಯ ಸೇನ್‌: ಥಾಮಸ್‌ ಕಪ್‌ ಅನುಭವ ವಿವರಿಸಿದ ಬ್ಯಾಡ್ಮಿಂಟನ್ ತಾರೆ - ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್

ದೇಶದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಸೋಮವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

Badminton player Lakshya Sen arrives   Bengaluru
ಬೆಂಗಳೂರಿಗೆ ಆಗಮಿಸಿದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್

By

Published : May 17, 2022, 7:57 AM IST

ಬೆಂಗಳೂರು:ಮೇ 15ರಂದು ಥಾಮಸ್ ಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ ಭಾರತ ಬ್ಯಾಡ್ಮಿಂಟನ್‌ ತಂಡದ ಪ್ರಮುಖ ಆಟಗಾರ ಲಕ್ಷ್ಯ ಸೇನ್ ಸೋಮವಾರ ರಾತ್ರಿ ಬೆಂಗಳೂರಿಗೆ ಮರಳಿದರು. ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಕುಟುಂಬ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು.

ಬಳಿಕ ಮಾತನಾಡಿದ ಲಕ್ಷ್ಯ ಸೇನ್, 'ಇದು ನಿಜವಾಗಿಯೂ ದೇಶಕ್ಕೆ ಹೆಮ್ಮೆಯ ಕ್ಷಣ. ಎಲ್ಲರೂ ತಂಡವಾಗಿ ಒಗ್ಗೂಡಿದ್ದೇವೆ. ಫೈನಲ್‌ನಲ್ಲಿ ಸಂಪೂರ್ಣ ವಿಭಿನ್ನ ವಾತಾವರಣವಿತ್ತು. ನಾನು ಮೊದಲ ಪಂದ್ಯದಲ್ಲಿ ಸೋತಿದ್ದರಿಂದ ಪಂದ್ಯದಲ್ಲಿ ಉತ್ತಮ ಆರಂಭ ಹೊಂದಿರಲಿಲ್ಲ. ಎರಡು ಮತ್ತು ಮೂರನೇ ಪಂದ್ಯದಲ್ಲಿ ಚೆನ್ನಾಗಿ ಆಡಿದೆ. ಕೊನೆಯ ಲೆಗ್‌ನಲ್ಲಿ ಭಯಭೀತನಾಗಿದ್ದೆ. ಆದರೆ ಆತುರವನ್ನು ತೋರಿಸಲಿಲ್ಲ.

ಪಂದ್ಯಾವಳಿಯಲ್ಲಿ ನಾವು ಇಲ್ಲಿಯವರೆಗೆ ಹೋಗುತ್ತೇವೆ ಎಂದು ಭಾವಿಸಿರಲಿಲ್ಲ. ಆದರೆ ಒಂದು ವಿಷಯ ಖಚಿತವಾಗಿತ್ತು. ನಾವು ಯಾವುದೇ ತಂಡವನ್ನು ಸೋಲಿಸಬಹುದು ಎಂದು ತಿಳಿದಿತ್ತು. ನಮ್ಮ ಆಲೋಚನೆಯು ಒಂದು ಸಮಯದಲ್ಲಿ ಒಂದು ಪಂದ್ಯದ ಮೇಲೆ ಮಾತ್ರ ಕೇಂದ್ರೀಕರಿಸಿತ್ತು' ಎಂದು ಸೇನ್ ಹೇಳಿದರು.

ಇದನ್ನೂ ಓದಿ:ಥಾಮಸ್​ ಕಪ್ ದಿಗ್ವಿಜಯ: ಲಕ್ಷ್ಯ ಸೇನ್​ಗೆ ₹5 ಲಕ್ಷ ಬಹುಮಾನ ಘೋಷಿಸಿದ ಸಿಎಂ

ABOUT THE AUTHOR

...view details