ಬೆಂಗಳೂರು: ಲಾಲ್ ಬಾಗ್ ಫ್ಲವರ್ ಶೋ ನೋಡೋದು ಯಾರಿಗೆ ಇಷ್ಟವಿಲ್ಲ ಹೇಳಿ.. ಮಕ್ಕಳಿಂದ ಹಿಡಿದು ವಯಸ್ಕರು, ವೃದ್ಧರೂ ಸಹ ಬರ್ತಾರೆ. ಆದರೆ ಕೈಯಲ್ಲಿ ಮಗು ಹಿಡಿದುಕೊಂಡು ಬರೋ ತಾಯಂದಿರು ಮಗುವಿಗೆ ಹಸಿವು ಆದಾಗ ಹಾಲುಣಿಸಲು ಅಲ್ಲಿ, ಇಲ್ಲಿ ಅಂತ ಸರ್ಕಸ್ ಮಾಡಬೇಕಿತ್ತು.
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬೇಬಿ ಫೀಡಿಂಗ್ ಬೂತ್: ಅಧಿಕಾರಿಗಳ ಕಾರ್ಯಕ್ಕೆ ತಾಯಂದಿರ ಸಲಾಂ - ಬೆಂಗಳೂರು ಲಾಲ್ ಬಾಗ್ ಫ್ಲವರ್ ಶೋ ಸುದ್ದಿ
ಲಾಲ್ ಬಾಗ್ನ ತೋಟಗಾರಿಕೆ ಇಲಾಖೆ ಸಸ್ಯಕಾರಿ ಫ್ಲವರ್ ಶೋನಲ್ಲಿ ಬೇಬಿ ಫೀಡಿಂಗ್ ಬೂತ್ ನಿರ್ಮಿಸಿದೆ. ತಾಯಂದಿರ ಕಷ್ಟ ಅರಿತ ಅಧಿಕಾರಿಗಳು ಈ ಬಾರಿಯ ಫ್ಲವರ್ ಶೋನಲ್ಲಿ ಬೇಬಿ ಫೀಡಿಂಗ್ ಬೂತ್ ನಿರ್ಮಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಲಾಲ್ ಬಾಗ್ ಫ್ಲವರ್ ಶೋ
ಸದ್ಯ ಅದಕ್ಕೆ ಫುಲ್ ಸ್ಟಾಪ್ ಇಟ್ಟಿರೋ ತೋಟಗಾರಿಕೆ ಇಲಾಖೆ ಸಸ್ಯಕಾರಿ ಫ್ಲವರ್ ಶೋನಲ್ಲಿ ಬೇಬಿ ಫೀಡಿಂಗ್ ಬೂತ್ ನಿರ್ಮಿಸಿದೆ. ತಾಯಂದಿರ ಕಷ್ಟ ಅರಿತ ಅಧಿಕಾರಿಗಳು ಈ ಬಾರಿಯ ಫ್ಲವರ್ ಶೋನಲ್ಲಿ ಬೇಬಿ ಫೀಡಿಂಗ್ ಬೂತ್ ನಿರ್ಮಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಲಾಲ್ ಬಾಗ್ನ ನಾಲ್ಕು ದ್ವಾರಗಳಲ್ಲಿ ಮತ್ತು ಗಾಜಿನ ಮನೆಯ ಸಮೀಪದಲ್ಲಿ ಫೀಡಿಂಗ್ ಬೂತ್ ಸ್ಥಾಪಿಸಿದ್ದು, ಹಸಿದ ಕಂದಮ್ಮನಿಗೆ ಹಾಲುಣಿಸುವ ತಾಯಂದಿರು ಅತ್ತಿತ್ತ ಪರದಾಡುವ ಬದಲು ನೆಮ್ಮದಿಯಿಂದ ಹಾಲುಣಿಸಲು ಈ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ.