ನೆಲಮಂಗಲ: ಕೋವಿಡ್ 19 ಹಿನ್ನೆಲೆ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ಕೆಲ ಮಾರ್ಗಸೂಚಿ ನಿಯಮಗಳನ್ನು ಪ್ರಕಟಿಸಲಾಗಿದೆ. ಆದ್ರೆ ಇದೀಗ ಈ ನಿಯಮಗಳೇ ಭಕ್ತರ ಕಿರುಕುಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ನೆಲಮಂಗಲದಿಂದ ಅಯ್ಯಪ್ಪನ ದರ್ಶನ ಪಡೆಯಲು ಹೋದ ಭಕ್ತರು ಕೇರಳ ಪೊಲೀಸರು ಕಿರುಕುಳಕ್ಕೆ ಬೇಸತ್ತು ಹೋಗಿದ್ದಾರೆ ಎನ್ನಲಾಗಿದೆ. ಕೇರಳ ಪೊಲೀಸರ ವಿರುದ್ಧ ಭಕ್ತರು ವಿಡಿಯೋ ಮಾಡಿ ತಮ್ಮ ನೋವು ತೋಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಮಾಡಿದ ಅಯ್ಯಪ್ಪನ ಭಕ್ತರು ಅಯ್ಯಪ್ಪನ ಮಾಲೆ ಧರಿಸಿ ನೆಲಮಂಗಲ ಮೂಲದ 11 ಭಕ್ತರು ಶಬರಿಮಲೆಗೆ ಹೊಗಿದ್ರು, ಹೋಗುವ ಮುನ್ನ ಕರ್ನಾಟಕದಲ್ಲಿನ ವೈದ್ಯರ ಬಳಿ ಕೊವೀಡ್ ಟೆಸ್ಟ್ ಮಾಡಿಸಿದ್ದರು. ಕೋವಿಡ್ ಪರೀಕ್ಷೆಯಲ್ಲಿ ನೆಗಟಿವ್ ಬಂದ ದಾಖಲೆ ಪತ್ರವನ್ನು ತೆಗೆದುಕೊಂಡು ಹೋಗಿದ್ದಾರೆ. ದೇವರ ದರ್ಶನಕ್ಕೆ ಹೋಗುವ ಭಕ್ತರು ಕೋವಿಡ್ ನೆಗಟಿವ್ ವರದಿ ತೋರಿಸಿದರೆ ಮಾತ್ರ ದರ್ಶನಕ್ಕೆ ಬಿಡಲಾಗುತ್ತಿದೆ. ದೇವಸ್ಥಾನದ ನಿಯಮದಂತೆ ನೆಲಮಂಗಲದ ಭಕ್ತರು ಕೋವಿಡ್ ನೆಗಟಿವ್ ದಾಖಲೆಗಳನ್ನು ಕೇರಳ ಪೋಲಿಸರಿಗೆ ತೋರಿಸಿದ್ದಾರೆ.
ಆದ್ರೆ ಕೇರಳ ಪೊಲೀಸರು ಕರ್ನಾಟಕ ವೈದ್ಯರು ಕೊಟ್ಟ ಕೋವಿಡ್ ನೆಗಟಿವ್ ದಾಖಲೆಗಳಿಗೆ ಮಾನ್ಯತೆ ನೀಡಿಲ್ಲ, ತಾವೇ ಕೋವಿಡ್ ಟೆಸ್ಟ್ ಮಾಡುವುದಾಗಿ ಹೇಳಿ ಪ್ರತಿಯೊಬ್ಬರಿಂದ 625 ರೂಪಾಯಿ ಕಟ್ಟಿಸಿಕೊಂಡಿದ್ದಾರೆ. ಕೇವಲ 5 ನಿಮಿಷದಲ್ಲಿ ಕೋವಿಡ್ ವರದಿ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಸರ್ಕಾರ ಜಾರಿ ಮಾಡಿದ ಕೊರೊನಾ ನಿಯಮಗಳನ್ನು ಬಳಸಿಕೊಂಡು ಭಕ್ತರಿಂದ ಹಣ ದೋಚುತ್ತಿದ್ದಾರೆ ಎಂದು ಭಕ್ತರ ಆರೋಪಿಸಿದ್ದಾರೆ.