ಕರ್ನಾಟಕ

karnataka

ETV Bharat / city

ಆಯುಧ ಪೂಜೆ: ರಾಜಭವನದಲ್ಲಿ ರಾಜ್ಯಪಾಲರಿಂದ ವಿಶೇಷ ಪೂಜೆ, ಕಾವೇರಿಯಲ್ಲೂ ಮನೆ ಮಾಡಿದ ಸಂಭ್ರಮ - Bangalore

ಆಯುಧ ಪೂಜೆ ಪ್ರಯುಕ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ರಾಜಭವನದಲ್ಲಿ ವಿವಿಧ ಕಚೇರಿಗಳ ಆಯುಧ ಪೂಜೆಯನ್ನು ನೆರವೇರಿಸಿದರು.

special worship by governor thaawarchand gehlot
ಆಯುಧ ಪೂಜೆ: ರಾಜಭವನದಲ್ಲಿ ರಾಜ್ಯಪಾಲರಿಂದ ವಿಶೇಷ ಪೂಜೆ

By

Published : Oct 14, 2021, 5:03 PM IST

ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ರಾಜಭವನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ರಾಜಭವನದ ಆಡಳಿತ ಕಚೇರಿಯಲ್ಲಿ ತಾಯಿ ಚಾಮುಂಡೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ರಾಜ್ಯಪಾಲರು, ಆಯುಧ ಪೂಜೆ ನಿಮಿತ್ತ ರಾಜಭವನದ ಪೊಲೀಸ್ ಗಾರ್ಡ್ ಕೊಠಡಿಯಲ್ಲಿ ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಇರಿಸಿ ಪೂಜೆ ನೆರವೇರಿಸಿದರು. ನಂತರ ರಾಜಭವನದ ವಾಹನಗಳಿಗೆ ಪೂಜೆ ಸಲ್ಲಿಸಿ, ಎಲ್ಲರಿಗೂ ಶುಭ ಕೋರಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಬಿಎಸ್​​ವೈ ನಿವಾಸದಲ್ಲಿ ಆಯುಧ ಪೂಜೆ ಸಂಭ್ರಮ

ಬಿಎಸ್​​ವೈ ನಿವಾಸದಲ್ಲಿ ಆಯುಧ ಪೂಜೆ ಸಂಭ್ರಮ:

ಸರ್ಕಾರಿ ನಿವಾಸ ಕಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಯುಧ ಪೂಜೆ ನೆರವೇರಿಸಿದರು. ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಿಎಸ್​​ವೈ, ಆಯುಧ ಪೂಜೆ ಅಂಗವಾಗಿ ಕಾವೇರಿ ನಿವಾಸದಲ್ಲಿ ಪೊಲೀಸ್ ಗಾರ್ಡ್, ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಇರಿಸಿ ಪೂಜೆ ಸಲ್ಲಿಸಿದರು. ನಂತರ ತಮ್ಮ ಹೊಸ ಕಾರು ಟೊಯೊಟಾ ವೆಲ್ ಫೈರ್ ಸೇರಿದಂತೆ ಸಿಬ್ಬಂದಿ ವಾಹನಗಳಿಗೆ ಪೂಜೆ ಸಲ್ಲಿಸಿ, ಎಲ್ಲರಿಗೂ ಶುಭ ಕೋರಿದರು.

ಬಿಎಸ್​​ವೈ ನಿವಾಸದಲ್ಲಿ ಆಯುಧ ಪೂಜೆ ಸಂಭ್ರಮ

ABOUT THE AUTHOR

...view details