ಬೆಂಗಳೂರು:ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಆಯುಧ ಪೂಜೆಯಾದ ಇಂದು ಯಾವಾಗಲು ಬ್ಯುಸಿ ಜೀವನದಲ್ಲಿರುವ ಪೊಲೀಸರು ಕೂಡ ತಮ್ಮ ತಮ್ಮ ಠಾಣೆಗಳಲ್ಲಿ ಹಬ್ಬ ಆಚರಣೆ ಮಾಡಿದರು.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮ: ಶೇರ್ವಾನಿಯಲ್ಲಿ ಭಾಸ್ಕರ್ ರಾವ್ - ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲೂ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಆಯುಧ ಪೂಜೆಯಾದ ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟಿಲ್ ಕಮಿಷನರ್ ಕಚೇರಿಯಲ್ಲಿ ಪೂಜೆ ಮಾಡಿ ಸಂಭ್ರಮಪಟ್ಟರು.

ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ರಂಗೋಲಿ, ಕಮಿಷನರ್ ಕಚೇರಿ ಒಳಗೆ ಹೂವುಗಳಿಂದ ಶೃಂಗಾರ, ದಿನನಿತ್ಯ ಮಾತಿನ ಚಟಾಕಿಗಳಲ್ಲಿ ಬ್ಯುಸಿಯಾಗಿದ್ದ ಕಂಟ್ರೂಲ್ ರೂಂನಲ್ಲಿ ವಾಕಿಟಾಕಿಗಳಿಗೆ ಹೂವಿಟ್ಟು ಪೂಜೆ ಮಾಡಿದರು. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟಿಲ್ ಕಮಿಷನರ್ ಕಚೇರಿಯಲ್ಲಿ ಪೂಜೆ ಮಾಡಿ ಸಂಭ್ರಮಪಟ್ಟರು.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತಾನಾಡಿ, ಪೊಲೀಸ್ ಇಲಾಖೆಯಿಂದ ದಸರಾ, ಆಯುಧ ಹಾಗೂ ವಿಜಯ ದಶಮಿ ಹಬ್ಬದ ಶುಭಾಶಯಗಳು. ನಾವು ನಮ್ಮ ಕಚೇರಿ, ಸಶಸ್ತ್ರ ಮೀಸಲು ಪಡೆ, ಮುಖ್ಯ ಕಚೇರಿ ಸೇರಿದಂತೆ ಹಲವು ಕಡೆ ಹಬ್ಬವನ್ನ ಆಚರಿಸುತಿದ್ದೇವೆ. ನಾಡಿನ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡಿದ್ರೆ ಶಾಂತಿ ಇರತ್ತೆ, ಐಕ್ಯತೆ ಇರುತ್ತೆ ಎಂದು ಹೇಳಿದರು.