ಬೆಂಗಳೂರು: ನಗರದಲ್ಲಿ ಸದ್ಯಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು ಜನರು ಕೊಂಚ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಇದೀಗ ಹೊಸ ರೂಪಾಂತರಿ ವೈರಸ್ AY4.2 ನಿಂದಾಗಿ ಮತ್ತೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ರೂಪಾಂತರಿ AY4.2 ವೈರಸ್ ಭೀತಿ: ಮತ್ತೆ ಕಠಿಣ ಕ್ರಮ ಜಾರಿಗೆ ನಿರ್ಧರಿಸಿದ ಬಿಬಿಎಂಪಿ - AY4.2 coronavirus delta variant cases found in benglure
AY4.2 ರೂಪಾಂತರಿ ವೈರಸ್ ತಡೆಯುವ ಉದ್ದೇಶದಿಂದ ಬಿಬಿಎಂಪಿ, ಆರೋಗ್ಯ ಇಲಾಖೆ ಮತ್ತು ತಜ್ಞರ ಅಭಿಪ್ರಾಯ ಪಡೆದು ಕಠಿಣ ಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ.
coronavirus
ಈಗಿನಿಂದಲೇ AY4.2 ರೂಪಾಂತರಿ ವೈರಸ್ ತಡೆಯುವ ಉದ್ದೇಶದಿಂದ ಬಿಬಿಎಂಪಿ, ಆರೋಗ್ಯ ಇಲಾಖೆ ಮತ್ತು ತಜ್ಞರ ಅಭಿಪ್ರಾಯ ಪಡೆದು ಕಠಿಣ ಕ್ರಮಗಳನ್ನ ಜಾರಿಗೊಳಿಸಲು ನಿರ್ಧರಿಸಿದೆ. ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನಲ್ಲಿ ನಗರದಲ್ಲಿ ಒಟ್ಟು 3 ರೂಪಾಂತರಿ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು 7 ಕೇಸ್ ದೃಢಪಟ್ಟಿದೆ. ಹೀಗಾಗಿ ಆರಂಭದಲ್ಲೇ ರೂಪಾಂತರಿ ವೈರಸ್‌ನ ತಡೆಗೆ ಬಿಬಿಎಂಪಿ ಪ್ಲಾನ್ ಮಾಡಿದೆ.
ಹೊಸ ರೂಪಾಂತರಿ ತಡೆಗೆ ಬಿಬಿಎಂಪಿ ಕೈಗೊಂಡ ಕ್ರಮಗಳು:
- ಹೆಚ್ಚು ಮಾದರಿಗಳನ್ನು ಪಡೆದು ಜಿನೋಮ್ ಸೀಕ್ವೆಂನ್ಸಿಂಗ್ ಟೆಸ್ಟ್ಗೆ ಒಳಪಡಿಸುವುದು.
- ನಿತ್ಯದ ಕೇಸ್ಗಳು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ, ಸಂಪರ್ಕಿತರ ಸಂಖ್ಯೆ ಮೇಲೆ ಹದ್ದಿನ ಕಣ್ಣಿಡುವುದು.
- AY4.2 ಸಬ್ ವೇರಿಯಂಟ್ ಬಗ್ಗೆ ಹೆಚ್ಚಿನ ಅಧ್ಯಯನಕ್ಕೊಳಪಡಿಸೋದು.
- ಹೊಸ ರೂಪಾಂತರಿ ವೈರಸ್ ಕಾಣಿಸಿಕೊಂಡಿರುವ ಸೋಂಕಿತರ ಸಂಪರ್ಕಿತರನ್ನು ಐಸೋಲೇಶನ್ ಮಾಡುವುದು.
- ರೂಪಾಂತರಿ ವೈರಸ್ಗಳ ಅಧ್ಯಯನಕ್ಕೆ ಹೆಚ್ಚು ಒತ್ತು.
- ಕೇಂದ್ರ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು.
- ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು.
- ಜನ ಗುಂಪು ಸೇರದಂತೆ ನೋಡಿಕೊಳ್ಳಲು ಮಾರ್ಷಲ್ಗೆ ಸೂಚನೆ.
- ಪ್ರತಿಯೊಬ್ಬ ಅರ್ಹರಿಗೂ ಶೀಘ್ರದಲ್ಲೇ ವ್ಯಾಕ್ಸಿನೇಶನ್ ಹಾಕುವುದು.
- ರೂಪಾಂತರಿ ವೈರಸ್ ಪತ್ತೆಯಾಗಿರುವ ಲ್ಯಾಬ್ ತಜ್ಞರೊಂದಿಗೆ ನಿರಂತರ ಚರ್ಚೆ.
- ಸರ್ಕಾರ ಸೂಚಿಸಿದ್ರೆ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಕ್ವಾರಂಟೈನ್ಗೆ ತಯಾರಿ.