ಕರ್ನಾಟಕ

karnataka

ETV Bharat / city

ಫೀಲ್ಡ್​ಗಿಳಿದ ಸಿವಿಲ್ ಡಿಫೆನ್ಸ್, ಕೊರೊನಾ ಕುರಿತು ಜಾಗೃತಿ - Civil Defense news

ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಬಹಳಷ್ಟು ಜಾಗೃತಿ ಕಾರ್ಯಕ್ರಮವನ್ನ ಪೊಲೀಸರು, ಬಿಬಿಎಂಪಿ, ಆರೋಗ್ಯ ಇಲಾಖೆ ಜಂಟಿಯಾಗಿ ನಡೆಸುತ್ತಿವೆ.

ಸಿವಿಲ್ ಡಿಫೆನ್ಸ್
ಸಿವಿಲ್ ಡಿಫೆನ್ಸ್

By

Published : Mar 30, 2020, 2:46 PM IST

ಬೆಂಗಳೂರು: ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಜಾಗೃತಿ ಕಾರ್ಯಕ್ರಮವನ್ನ ಪೊಲೀಸರು, ಬಿಬಿಎಂಪಿ, ಆರೋಗ್ಯ ಇಲಾಖೆಯಿಂದ ನಡೆಸಲಾಗುತ್ತಿದೆ.

ಇಂದು ಬೆಳಗ್ಗೆ ಫೀಲ್ಡ್ ಗಿಳಿದಿದ್ದ ಸಿವಿಲ್ ಡಿಫೆನ್ಸ್, ನಗರದ ಬಹುತೇಕ ಕಡೆ ಜಾಗೃತಿ ಮೂಡಿಸಿದ್ದಾರೆ. ಕೊರೊನಾ ಅಂದ್ರೆ ಏನು?, ಸದ್ಯದ ಕೊರೊನಾ ಸ್ಥಿತಿಗತಿ ಹೇಗಿದೆ?, ಕೊರೊನಾ ವೈರಸ್ ಯಾವ ರೀತಿ ಹರಡುತ್ತದೆ, ಕೊರೊನಾ ತಡೆಗಟ್ಟಲು ಏನು ಮಾಡಬೇಕು ಎಂದು ಬೈಕ್ ಮೂಲಕ ಜಾಗೃತಿ ಕಾರ್ಯಕ್ರಮದ ಜೊತೆಗೆ ಗಲ್ಲಿ ಗಲ್ಲಿಗಳಲ್ಲಿ ಚಲಿಸಿ ಮನೆಯಿಂದ ಹೊರ ಬರದಂತೆ ಮನವಿ ಮಾಡಿದ್ದಾರೆ. ವಿದ್ಯಾರಣ್ಯಪುರ, ದೊಡ್ಡ ಬೊಮ್ಮಸಂದ್ರ, ಎಂ ಎಸ್ ಪಾಳ್ಯ, ಹೆಬ್ಬಾಳ, ಬ್ಯಾಟರಾಯನಪುರ ಸೇರಿ ಹಲವೆಡೆ ಜಾಗೃತಿ ಮೂಡಿಸಿದ್ದಾರೆ.

ABOUT THE AUTHOR

...view details