ಬೆಂಗಳೂರು :ಬಿಬಿಎಂಪಿಯ ಜನಜಾಗೃತಿ ಯಶಸ್ವಿಯಾಗಿದೆ. ಕೋವಿಡ್ 3ನೇ ಅಲೆ ನಗರಕ್ಕೆ ಎಂಟ್ರಿಯಾಗಬಾರದೆಂಬ ಅರಿವು ಜನರಲ್ಲಿದೆ. ಮಾಸ್ಕ್ ಇಲ್ಲದೇ ತಿರುಗಾಡುತ್ತಿದ್ದ ಎಷ್ಟೋ ಮಂದಿ ಇದೀಗ ಮಾಸ್ಕ್ ಇಲ್ಲದೇ ಹೊರ ಬರುತ್ತಿಲ್ಲ. ಇದಕ್ಕೆ ಬಿಬಿಎಂಪಿ ವಿಧಿಸಿದ ದಂಡದ ಅಂಕಿ-ಅಂಶಗಳ ಪಟ್ಟಿ ಉದಾಹರಣೆ.
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾಕಷ್ಟು ಸಾವು-ನೋವುಗಳಾಗಿವೆ. ನಮ್ಮ ಕಣ್ಣಮುಂದೆಯೇ ನಮ್ಮ ಹತ್ತಿರದವರು ಮೃತಪಟ್ಟಿದ್ದನ್ನು ನೋಡಿದ್ದೇವೆ. ಇದು ಸಾರ್ವಜನಿಕರಲ್ಲಿ ಸೋಂಕಿನ ಭೀಕರತೆಯ ಅರಿವು ಮೂಡಿಸಿದೆ.
ಜೊತೆಗೆ ಮಾರ್ಷಲ್‌ಗಳ ಪ್ರತ್ಯೇಕ ತಂಡ ನಿಯೋಜಿಸಿ ಮಾಸ್ಕ್ ಧರಿಸದವರಿಗೆ ಬಿಬಿಎಂಪಿ ದಂಡ ವಿಧಿಸುತ್ತಿರುವುದೂ ಕೂಡ ಜನರು ಮಾಸ್ಕ್ ಮರೆತು ಹೊರಗೆ ಓಡಾಡದಂತೆ ಮಾಡಿದೆ. ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಮಾಸ್ಕ್ ಧರಿಸುವವರ ಪ್ರಮಾಣ ಬೆಂಗಳೂರಲ್ಲಿ ಹೆಚ್ಚಿದೆ.