ಬೆಂಗಳೂರು: ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಸಾಹಿತಿ ಚಂದ್ರಶೇಖರ್ ಕಂಬಾರ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಭಿನಂದಿಸಿ ಸನ್ಮಾನಿಸಿದರು.
ಪದ್ಮಭೂಷಣ ಪ್ರಶಸ್ತಿಗೆ ಪಾತ್ರವಾದ ಸಾಹಿತಿ ಚಂದ್ರಶೇಖರ ಕಂಬಾರರನ್ನು ಸನ್ಮಾನಿಸಿದ ಸಿಎಂ - ಕಂಬಾರರನ್ನು ಸನ್ಮಾನಿಸಿದ ಸಿಎಂ
ರೇಸ್ ಕೋರ್ಸ್ ರಸ್ತೆಯಲ್ಲಿ ಇರುವ ಶಕ್ತಿಭವನದಲ್ಲಿ ಎಂಎಸ್ಐಎಲ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಸಾಹಿತಿ ಕಂಬಾರ ಅವರನ್ನು, ಆತ್ಮೀಯವಾಗಿ ಬರಮಾಡಿಕೊಂಡ ಸಿಎಂ ಯಡಿಯೂರಪ್ಪ ಸನ್ಮಾನಿಸಿದರು.
![ಪದ್ಮಭೂಷಣ ಪ್ರಶಸ್ತಿಗೆ ಪಾತ್ರವಾದ ಸಾಹಿತಿ ಚಂದ್ರಶೇಖರ ಕಂಬಾರರನ್ನು ಸನ್ಮಾನಿಸಿದ ಸಿಎಂ ಸಿಎಂ](https://etvbharatimages.akamaized.net/etvbharat/prod-images/768-512-10550693-696-10550693-1612803176558.jpg)
ಸಿಎಂ
ರೇಸ್ ಕೋರ್ಸ್ ರಸ್ತೆಯಲ್ಲಿ ಇರುವ ಶಕ್ತಿಭವನದಲ್ಲಿ ಎಂಎಸ್ಐಎಲ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಸಾಹಿತಿ ಕಂಬಾರ ಅವರನ್ನು, ಆತ್ಮೀಯವಾಗಿ ಬರಮಾಡಿಕೊಂಡ ಸಿಎಂ ಯಡಿಯೂರಪ್ಪ ಸನ್ಮಾನಿಸಿದರು. ಪದ್ಮಭೂಷಣ ಪ್ರಶಸ್ತಿಯ ಗರಿಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಮತ್ತಷ್ಟು ಹಿರಿಮೆ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.