ಬೆಂಗಳೂರು: ನಿನ್ನೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅವನೇ ಶ್ರೀಮನ್ ನಾರಾಯಣ ಕನ್ನಡ ಸಿನಿಮಾ ಪ್ರದರ್ಶನವಾಗಿದ್ದು,182 ನಿಮಿಷದ ಚಿತ್ರವನ್ನ ಪ್ರೇಕ್ಷಕರು ಟಿವಿಯಲ್ಲಿ ಸುಮರು 255 ನಿಮಿಷ ವೀಕ್ಷಣೆ ಮಾಡಿದ್ದಾರೆ.
ಹಿರಿತೆರೆಯಲ್ಲಿ 3 ಗಂಟೆ... ಕಿರುತೆರೆಯಲ್ಲಿ 4.25 ತಾಸು ಪ್ರಸಾರವಾದ ಅವನೇ ಶ್ರೀಮನ್ನಾರಾಯಣ! - cinema news
ನಿನ್ನೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅವನೇ ಶ್ರೀಮನ್ ನಾರಾಯಣ ಕನ್ನಡ ಸಿನಿಮಾ ಪ್ರದರ್ಶನವಾಗಿದ್ದು,182 ನಿಮಿಷದ ಚಿತ್ರವನ್ನ ಪ್ರೇಕ್ಷಕರು ಟಿವಿಯಲ್ಲಿ ಸುಮರು 255 ನಿಮಿಷ ವೀಕ್ಷಣೆ ಮಾಡಿದ್ದಾರೆ.

ಅವನೇ ಶ್ರೀಮನ್ ನಾರಾಯಣ ನಿನ್ನೆ ಸಂಜೆ 6 ಗಂಟೆಯಿಂದ 10.15 ರವರೆಗೆ ಪ್ರಸಾರವಾಗಿದೆ. 182 ನಿಮಿಷದ ಚಿತ್ರಕ್ಕೆ ಏನಿಲ್ಲ ಅಂದರೂ 15 ನಿಮಿಷಕ್ಕೆ ಜಾಹೀರಾತು ನೀಡಲಾಗಿದ್ದು, ಒಟ್ಟು 1 ಗಂಟೆ ಜಾಹೀರಾತು ನೀಡಲಾಗಿದೆ. ಇದರ ಜೊತೆ ಇದೆ ಮೊದಲ ಬಾರಿ ಚಿತ್ರದ ಮೇಕಿಂಗ್ ಕ್ಲಿಪ್ಸ್ ಮತ್ತು ಚಿತ್ರದ ಹೆಗ್ಗಳಿಕೆಯನ್ನು ಕಾಮೆಂಟರಿ ಮುಖಾಂತರ ಸ್ಟಾರ್ ಸುವರ್ಣ ವಾಹಿನಿ ಪ್ರಸಾರ ಮಾಡಿತ್ತು.
ಒಂದು ಅಂದಾಜಿನ ಪ್ರಕಾರ ‘ಅವನೇ ಶ್ರೀಮನ್ ನಾರಾಯಣ’ ಚಿತ್ರದ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ,ರಕ್ಷಿತ್ ಶೆಟ್ಟಿ ಮತ್ತು ಹೆಚ್.ಕೆ. ಪ್ರಕಾಷ್ ಚಿತ್ರೀಕರಣದ ಸಮಯದಲ್ಲೇ ಟಿವಿ ಹಕ್ಕುಗಳನ್ನ ಸ್ಟಾರ್ ಸುವರ್ಣ ವಾಹಿನಿಗೆ ಕೊಟ್ಟಿದ್ದರು. ಅದರ ಮೊತ್ತ ಸುಮಾರಿ 5.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.