ಬೆಂಗಳೂರು: ದಿನೇ ದಿನೆ ಕೋವಿಡ್ ಉಲ್ಬಣಗೊಳ್ಳುತ್ತಿದೆ. ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲೂ ಹೆಚ್ಚು ಸೋಂಕಿತರು ಬೆಂಗಳೂರಿನಲ್ಲೇ ಪತ್ತೆಯಾಗಿದ್ದು, ಮೂರನೇ ಅಲೆಯಲ್ಲೂ ಅದೇ ಪರಿಸ್ಥಿತಿ ಮುಂದುವರಿದಿದೆ.
ಈ ಹಿಂದೆ ಕೋವಿಡ್ ಎರಡನೇ ಅಲೆ ಸೋಂಕು ಹರಡುವಿಕೆ ಹೆಚ್ಚಾಗಿ ರೋಗಿಗಳಿಗೆ ಹಾಸಿಗೆ ಸಮಸ್ಯೆಯಿಂದ ಹಿಡಿದು ಔಷಧಿಯತನಕ ಎಲ್ಲದರ ಕೊರತೆ ಉಂಟಾಗಿತ್ತು. ಪರಿಣಾಮ ಹೆಚ್ಚು ಸಾವು ನೋವು ಅನುಭವಿಸಬೇಕಾಯಿತು. ಇದೀಗ ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಹತ್ತು ಪಟ್ಟು ಹೆಚ್ಚು ಸೋಂಕು ಹರಡುತ್ತಿದೆ. ಸೋಂಕಿತರ ಸಂಖ್ಯೆ ಬೆಂಗಳೂರು ಒಂದರಲ್ಲೇ 90 ಸಾವಿರಕ್ಕೂ ಅಧಿಕ ಇದ್ದು, ಭಾಗಶಃ ರೋಗಿಗಳು ಹೋಂ ಐಸೋಲೇಷನ್‌ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗಾಗಿಯೇ 4 ಸರ್ಕಾರಿ ಮೆಡಿಕಲ್ ಕಾಲೇಜು, 17 ಸರ್ಕಾರಿ ಆಸ್ಪತ್ರೆ ಹಾಗೂ 12 ಖಾಸಗಿ ಮೆಡಿಕಲ್ ಕಾಲೇಜು, 26 ಖಾಸಗಿ ಆಸ್ಪತ್ರೆ ಸೇರಿದಂತೆ 2 ಕೋವಿಡ್ ಕೇರ್ ಸೆಂಟರ್ಗಳನ್ನು ನಿಯೋಜಿಸಲಾಗಿದೆ. ಜನರಲ್ ಬೆಡ್, ಹೆಚ್ಡಿಯು, ಐಸಿಯು, ಐಸಿಯು ವಿಥ್ ವೆಂಟಿಲೇಟರ್ ಎಲ್ಲ ಸೇರಿ 6,518 ಬೆಡ್ಗಳ ವ್ಯವಸ್ಥೆಯಿದೆ.
ಚಿಕಿತ್ಸೆಗೆ ಹಾಸಿಗೆ ಲಭ್ಯವಿದೆಯಾ?
ಸೌಲಭ್ಯ ಇರುವ ಆಸ್ಪತ್ರೆ | ಲಭ್ಯ | ಬಳಕೆ | ಖಾಲಿ |
ಸರ್ಕಾರಿ ಮೆಡಿಕಲ್ ಕಾಲೇಜು | 435 | 113 | 322 |
ಸರ್ಕಾರಿ ಆಸ್ಪತ್ರೆ | 1,083 | 193 | 890 |
ಖಾಸಗಿ ಮೆಡಿಕಲ್ ಕಾಲೇಜು | 3,477 | 23 | 3,454 |
ಖಾಸಗಿ ಆಸ್ಪತ್ರೆ | 1,433 | 20 | 1,413 |
ಕೋವಿಡ್ ಕೇರ್ ಸೆಂಟರ್ | 90 | 52 | 38 |