ಕರ್ನಾಟಕ

karnataka

ETV Bharat / city

ಪರಿಹಾರ ಹಣಕ್ಕೆ ಆಟೋ-ಟ್ಯಾಕ್ಸಿ ಚಾಲಕರಿಂದ ಲಕ್ಷಾಂತರ ಅರ್ಜಿ ಸಲ್ಲಿಕೆ: 862 ರಿಜೆಕ್ಟ್ - ಬೆಂಗಳೂರು ಸುದ್ದಿ

ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರು ಪರಿಹಾರ ಧನ ಕೋರಿ ಅರ್ಜಿಗಳನ್ನು ಅನ್ಯ ಮಾರ್ಗದಲ್ಲಿ ಸಲ್ಲಿಸಲು ಅನವಶ್ಯಕವಾಗಿ ಪರಿಶ್ರಮ ಪಡುವುದನ್ನ ತಪ್ಪಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಚಾಲಕರಿಗೆ ಪರಿಹಾರ ಧನವನ್ನು ಅವರ ಖಾತೆಗೆ ನೇರವಾಗಿ ಡಿ.ಬಿ.ಟಿ. ಮೂಲಕ ವರ್ಗಾಯಿಸಲಾಗುತ್ತೆ. ರಾಜ್ಯಾದ್ಯಂತ 2.10 ಲಕ್ಷ ಆಟೋ, ಟ್ಯಾಕ್ಸಿ ಚಾಲಕರಿದ್ದು, ತಲಾ 3 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ.

Auto
ಆಟೋ-ಟ್ಯಾಕ್ಸಿ

By

Published : Jun 17, 2021, 11:35 AM IST

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದ 2ನೇ ಅಲೆಯ ಸಂಬಂಧ ಲಾಕ್​​ಡೌನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಹಲವು ವರ್ಗಗಳಿಗೆ ಪರಿಹಾರ ಧನವನ್ನ ಘೋಷಣೆ ಮಾಡಿದರು.

ಅದರಂತೆ ಆಟೋ ರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ (ಲೈಸೆನ್ಸ್ ಹೊಂದಿದ ಹಾಗೂ ನೋಂದಣಿ ಮಾಡಿಸಿದ) ಒಂದು ಬಾರಿ ಪರಿಹಾರವಾಗಿ‌ ರೂ. 3,000/-ಗಳನ್ನು ನೀಡಲು ನಿರ್ಧರಿಸಿತ್ತು. ಹೀಗಾಗಿ ಪರಿಹಾರ ಧನ ನೀಡಲು ಅರ್ಜಿಗಳನ್ನು ಆನ್‌ಲೈನ್​ನಲ್ಲಿ "ಸೇವಾ ಸಿಂಧು" ವೆಬ್‌ ಪೋರ್ಟಲ್‌ನ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿತ್ತು.

ಪರಿಹಾರದ ಹಣಕ್ಕೆ ಸಲ್ಲಿಕೆಯಾದ ಅರ್ಜಿಗಳ ವಿವರ

ಇನ್ನು ಆಟೋ ರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರು ಪರಿಹಾರ ಧನ ಕೋರಿ ಅರ್ಜಿಗಳನ್ನು ಅನ್ಯ ಮಾರ್ಗದಲ್ಲಿ ಸಲ್ಲಿಸಲು ಅನವಶ್ಯಕವಾಗಿ ಪರಿಶ್ರಮ ಪಡುವುದನ್ನ ತಪ್ಪಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಚಾಲಕರಿಗೆ ಪರಿಹಾರ ಧನವನ್ನು ಅವರ ಖಾತೆಗೆ ನೇರವಾಗಿ ಡಿ.ಬಿ.ಟಿ. ಮೂಲಕ ವರ್ಗಾಯಿಸಲಾಗುತ್ತೆ. ಸೇವಾ ಸಿಂಧು ಪೋರ್ಟಲ್​ನಲ್ಲಿ ಇಲ್ಲಿಯವರೆಗೂ ಒಟ್ಟು 2,33,706 ಅರ್ಜಿಗಳನ್ನ ಸಾರಿಗೆ ಇಲಾಖೆ ಸ್ವೀಕಾರ ಮಾಡಿದೆ. ಈ ಪೈಕಿ ಸಾರಿಗೆ ಇಲಾಖೆಯಿಂದ 2,27,886 ಅರ್ಜಿಗಳಿಗೆ ಅನುಮೋದನೆ ಸಿಕ್ಕಿದೆ. 1,97,121 ಅರ್ಜಿಗಳು ಆಟೊ ಅಪ್ರೋವ್ಡ್ ಆಗಿದ್ರೆ, ಮ್ಯಾನುಯಲ್ ಆಗಿ 30,765 ಅರ್ಜಿಗಳು ಅಂಗೀಕೃತವಾಗಿವೆ.

ಸದ್ಯ ಬಾಕಿ ಇರುವ 4958 ಅರ್ಜಿಗಳು ವೆರಿಫಿಕೇಷನ್ ಆಗಬೇಕಿದೆ. 862 ಅರ್ಜಿಗಳು ದಾಖಲೆಗಳು ಸರಿ ಇಲ್ಲದೆ ರಿಜೆಕ್ಟ್ ಆಗಿವೆ. ರಾಜ್ಯಾದ್ಯಂತ 2.10 ಲಕ್ಷ ಆಟೋ, ಟ್ಯಾಕ್ಸಿ ಚಾಲಕರಿದ್ದು, ತಲಾ 3 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಘೋಷಣೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳ ಸಲ್ಲಿಕೆ ಹಾಗೂ ಅನುಮೋದನೆಯಾಗಿದ್ದು ಹೆಚ್ಚುವರಿ ಅರ್ಜಿಗಳಿಗೂ ಪರಿಹಾರ ನೀಡುವಂತೆ ಪ್ರಸ್ತಾವನೆಯನ್ನ ಸಾರಿಗೆ ಇಲಾಖೆ ನೀಡಲಿದೆ.

ಇದನ್ನೂ ಓದಿ:ಆಟೋ, ಕ್ಯಾಬ್ ಚಾಲಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಹಣ ಪಡೆಯಲು ಅರ್ಜಿ ಸಲ್ಲಿಸುವಂತೆ ಸೂಚನೆ

ABOUT THE AUTHOR

...view details