ಬೆಂಗಳೂರು :ಇಡೀ ದೇಶದಲ್ಲಿದೀಗ ಎಲ್ಲ ವಸ್ತುಗಳ ದರವೂ ಹೆಚ್ಚಾಗುತ್ತಿದೆ. ತೈಲ ಹಾಗೂ ಗ್ಯಾಸ್ ದರ ಏರಿಕೆಗೆ ಆಟೋ ಚಾಲಕರು ತತ್ತರಿಸಿದ್ದಾರೆ.
ಆಟೋಗಳ ದರ ಪರಿಷ್ಕರಣೆಗೆ ಚಾಲಕರು ಪಟ್ಟು ಹಿಡಿದಿದ್ದಾರೆ. ಬೆಂಗಳೂರಿನಲ್ಲಿ ಶೀಘ್ರ ಆಟೋ ರಿಕ್ಷಾಗಳ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ 2 ಲಕ್ಷ ಆಟೋ ಚಾಲಕರಿದ್ದಾರೆ. ಪೆಟ್ರೋಲ್-ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆಯಿಂದ ಆಟೋಚಾಲಕರು ಕಂಗಾಲಾಗಿದ್ದಾರೆ.
ಹೀಗಾಗಿ, ಪ್ರಸ್ತುತ ಇರುವ ಪ್ರಯಾಣ ದರ 25 ರೂ.ದಿಂದ 36 ರೂ.ಗಳಷ್ಟು ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ. 2013ರಲ್ಲಿ 1.9 ಕಿಲೋ ಮೀಟರ್ಗೆ ಕನಿಷ್ಟ ಪ್ರಯಾಣ ದರ 20 ರಿಂದ 25 ರೂ. ಹೆಚ್ಚಳವಾಗಿತ್ತು.