ಕರ್ನಾಟಕ

karnataka

ETV Bharat / city

ಮಾನಸಿಕ ಖಿನ್ನತೆಯಿಂದ ಆಟೋ ಚಾಲಕ ಆತ್ಮಹತ್ಯೆ - undefined

ಹೊಸಕೋಟೆ ತಾಲೂಕಿನ ವಿಶ್ವೇಶ್ವರಯ್ಯ ಬಡಾವಣೆಯ ಕುವೆಂಪು ನಗರದಲ್ಲಿ ಮಾನಸಿಕ ಖಿನ್ನತೆಗೊಳಗಾಗಿದ್ದ ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆಟೋ ಚಾಲಕ

By

Published : May 15, 2019, 4:06 PM IST

ಬೆಂಗಳೂರು: ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಕೋಟೆ ತಾಲೂಕಿನ ವಿಶ್ವೇಶ್ವರಯ್ಯ ಬಡಾವಣೆಯ ಕುವೆಂಪು ನಗರದಲ್ಲಿ ನಡೆದಿದೆ.

ಎಸ್.ಜೆ.ಗಣೇಶ್ ಸಿಂಗ್ (28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದೆ. ಜಗತ್‌ಸಿಂಗ್ ಎಂಬುವರ ಮಗನಾದ ಈತ ಆಟೋ ಚಾಲಕನಾಗಿದ್ದ. ಹಣ್ಣು, ತರಕಾರಿಗಳನ್ನು ಸಹ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಆಟೋ ಚಾಲಕ

ಮಾನಸಿಕ ಖಿನ್ನತೆಗೊಳಗಾಗಿದ್ದ ಈತ ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಅಣ್ಣ ಮುನಿಸಿಂಗ್ ನೀಡಿರುವ ದೂರಿನನ್ವಯ ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details