ಕರ್ನಾಟಕ

karnataka

ETV Bharat / city

ಕೋವಿಡ್ ಬೆಡ್ ಬುಕ್ಕಿಂಗ್ ದಂಧೆ ತಡೆಯಲು ನೋಡಲ್ ಅಧಿಕಾರಿಗಳ ನಿಯೋಜನೆ - Bed Booking

ಕೆಎಎಸ್ ಶ್ರೇಣಿಯ ಅಧಿಕಾರಿಗಳನ್ನು ನೇಮಕ ಮಾಡಿದ್ದು ತಕ್ಷಣದಿಂದ ಕಡ್ಡಾಯವಾಗಿ ಕಾರ್ಯವರದಿ ಮಾಡಿಕೊಂಡು ವಾರ್ ರೂಂಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಿದೆ.

bbmp
bbmp

By

Published : May 8, 2021, 6:07 PM IST

ಬೆಂಗಳೂರು:ದಕ್ಷಿಣ ವಲಯದ ವಾರ್ ರೂಂನಲ್ಲಿ ಬೆಡ್ ಬುಕ್ಕಿಂಗ್ ದಂಧೆ ಬಯಲಾದ ನಂತರ ಎಚ್ಚೆತ್ತ ಬಿಬಿಎಂಪಿ, ಪ್ರತೀ ಎಂಟು ವಲಯದ ವಾರ್ ರೂಂ ಹಾಗೂ ಕೇಂದ್ರ ಕಚೇರಿಯ ವಾರ್ ರೂಂಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.

ಕೆಎಎಸ್ ಶ್ರೇಣಿಯ ಅಧಿಕಾರಿಗಳನ್ನು ನೇಮಕ ಮಾಡಿದ್ದು ತಕ್ಷಣದಿಂದ ಕಡ್ಡಾಯವಾಗಿ ಕಾರ್ಯವರದಿ ಮಾಡಿಕೊಂಡು ವಾರ್ ರೂಂಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಿದೆ.

ಕೇಂದ್ರ ಕಚೇರಿಯ ವಾರ್ ರೂಂಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ

ಪ್ರತಿನಿತ್ಯ ಕೆಎಎಸ್ ಅಧಿಕಾರಿ ವಾರ್ ರೂಂನಲ್ಲಿ ಮೇಲ್ವಿಚಾರಣೆ ನಡೆಸುವುದರಿಂದ ಸರ್ಕಾರಿ ಕೋಟಾದ ಬೆಡ್​ಗಳ ದುರುಪಯೋಗ ತಡೆಯಬಹುದು ಎಂದು ಅಂದಾಜಿಸಲಾಗಿದೆ.

ABOUT THE AUTHOR

...view details