ಕರ್ನಾಟಕ

karnataka

ETV Bharat / city

ಎಂಪಿಎಂ ಸಿಬ್ಬಂದಿ ಬೇರೆ ಇಲಾಖೆಗೆ ನಿಯೋಜನೆ: ಸಚಿವ ಜಗದೀಶ್ ಶೆಟ್ಟರ್ ಭರವಸೆ.. - ಭದ್ರಾವತಿಯಲ್ಲಿರುವ ಮೈಸೂರು ಕಾಗದ ಕಾರ್ಖಾನೆ

ನಷ್ಟದಲ್ಲಿರುವ ಎಂಪಿಎಂ ಕಾಗದ ಕಾರ್ಖಾನೆಯನ್ನು ಕಾರ್ಮಿಕ ಇಲಾಖೆ ಮುಚ್ಚುವಂತೆ ಆದೇಶ ಮಾಡಿದೆ. ಅದನ್ನು‌ ಪ್ರಶ್ನಿಸಿ ನೌಕರರ ಸಂಘ ಹೈಕೋರ್ಟ್ ಮೊರೆ ಹೋಗಿದೆ. ಕಾರ್ಖಾನೆ ಮುಚ್ಚುವ ಆದೇಶಕ್ಕೆ ತಡೆ ನೀಡಿ ತೀರ್ಪು ಮರುಪರಿಶೀಲಿಸುವಂತೆ ಸೂಚಿಸಿದೆ.

KN_BNG_07_COUNCIL_MPM_FACTORY_ISSUE_SCRIPT_9021933
ಎಂಪಿಎಂ ಸಿಬ್ಬಂದಿ ಬೇರೆ ಇಲಾಖೆಗೆ ನಿಯೋಜನೆ: ಜಗದೀಶ್ ಶೆಟ್ಟರ್ ಭರವಸೆ...!

By

Published : Mar 10, 2020, 8:55 PM IST

ಬೆಂಗಳೂರು :ಭದ್ರಾವತಿಯಲ್ಲಿರುವ ಮೈಸೂರು ಕಾಗದ ಕಾರ್ಖಾನೆಯಲ್ಲಿರುವ ಸಿಬ್ಬಂದಿಯನ್ನು ಬೇರೆ ಇಲಾಖೆಗೆ ನಿಯೋಜನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್​​ನ‌ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪ್ರಸನ್ನಕುಮಾರ್ ಕೇಳಿದ ಪ್ರಶ್ನೆ ಹಾಗೂ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಕೇಳಿದ ಉಪ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಜಗದೀಶ್ ಶೆಟ್ಟರ್, 73 ಉದ್ಯೋಗಿಗಳು ಇನ್ನೂ ವಿಆರ್​​ಎಸ್ ಪಡೆದಿಲ್ಲ. ಆ ಉದ್ಯೋಗಿಗಳಿಗೆ ಕಡಿಮೆ ವೇತನ ಇದೆ ಎಂದು ಬೇರೆ ಇಲಾಖೆಗೆ ನಿಯೋಜನೆ ಮಾಡಲು ಸಾಧ್ಯವಾಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಆ ಉದ್ಯೋಗಿಗಳನ್ನು ಬೇರೆ ಇಲಾಖೆಗೆ ನಿಯೋಜನೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಎಂಪಿಎಂ ಅರಣ್ಯ ವಾಚರ್‌ಗಳಿಗೂ ಕೂಡ ಅನುಕೂಲ ಕಲ್ಪಿಸಿ ಕೊಡಲು ನಾವು ಸಿದ್ದರಿದ್ದೇವೆ. ನಮ್ಮ ಇಲಾಖೆ ಸಿದ್ಧತೆ ನಡೆಸಿದೆ. ಹಣಕಾಸು‌ ಇಲಾಖೆ‌ ಒಪ್ಪಿಗೆ ಪಡೆದು ಅನುಕೂಲ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು. ನಷ್ಟದಲ್ಲಿರುವ ಎಂಪಿಎಂ ಕಾಗದ ಕಾರ್ಖಾನೆಯನ್ನು ಕಾರ್ಮಿಕ ಇಲಾಖೆ ಮುಚ್ಚುವಂತೆ ಆದೇಶ ಮಾಡಿದೆ. ಅದನ್ನು‌ ಪ್ರಶ್ನಿಸಿ ನೌಕರರ ಸಂಘ ಹೈಕೋರ್ಟ್ ಮೊರೆ ಹೋಗಿದೆ. ಕಾರ್ಖಾನೆ ಮುಚ್ಚುವ ಆದೇಶಕ್ಕೆ ತಡೆ ನೀಡಿ ತೀರ್ಪು ಮರುಪರಿಶೀಲಿಸುವಂತೆ ಸೂಚಿಸಿದೆ. ಕಾರ್ಮಿಕ ಇಲಾಖೆ ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಿದೆ. ಆದರೆ, ಈಗಾಗಲೇ ಕಾರ್ಖಾನೆಯನ್ನು ಖಾಸಗಿಗೆ‌ ಕೊಡುವ ಕುರಿತು ಸಂಪುಟದ‌ ನಿರ್ಧಾರವಾಗಿದೆ.‌ ಖಾಸಗಿಯವರು ತೆಗೆದುಕೊಂಡರೆ ಕಾರ್ಖಾನೆ ಉಳಿಯಲಿದೆ ಎಂದರು.

ABOUT THE AUTHOR

...view details