ಕರ್ನಾಟಕ

karnataka

ETV Bharat / city

ಬೆಂಗಳೂರು: ನಕಲಿ ಇನ್ಸ್​ಪೆಕ್ಟರ್​ ಎಂದುಕೊಂಡು ಅಸಲಿ ಇನ್ಸ್​ಪೆಕ್ಟರ್​ ಕೂಡಿ ಹಾಕಿ ಹಲ್ಲೆ - ಬೆಂಗಳೂರು ಇನ್ಸ್​ಪೆಕ್ಟರ್ ಹಲ್ಲೆ ನ್ಯೂಸ್​

ನಕಲಿ ಇನ್ಸ್​ಪೆಕ್ಟರ್​ ಎಂದುಕೊಂಡು ಅಸಲಿ ಇನ್ಸ್​ಪೆಕ್ಟರ್​ವೋರ್ವರನ್ನು​ ಕೂಡಿ ಹಾಕಿ ಹಲ್ಲೆ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

Bengaluru assault case
Bengaluru assault case

By

Published : Nov 10, 2021, 2:36 PM IST

Updated : Nov 10, 2021, 10:22 PM IST

ಬೆಂಗಳೂರು: ಬಿಲ್ ವಿಚಾರವಾಗಿ ಗಲಾಟೆ ತೆಗೆದಿದ್ದ ಜಿಎಸ್​ಟಿ ಇನ್ಸ್​ಪೆಕ್ಟರ್​ವೊರ್ವರನ್ನು ನಕಲಿ ಇನ್ಸ್​ಪೆಕ್ಟರ್ ಎಂದು ತಪ್ಪಾಗಿ ಭಾವಿಸಿ ಮೂರು ಗಂಟೆಗಳ ಕಾಲ ಕೂಡಿ ಹಾಕಿ ಪಬ್ ಮಾಲೀಕ ಹಾಗೂ ಆತನ ಸಹಚರರು ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.


ಜಿಎಸ್​ಟಿ ವಿಭಾಗದ ಇನ್ಸ್​ಪೆಕ್ಟರ್ ವಿನಯ್ ಮಂಡಲ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಹಾಗೂ ಅತ್ತಿಬೆಲೆ ವಿಭಾಗದ ಇನ್ಸ್​ಪೆಕ್ಟರ್ ಆಗಿರುವ ವಿನಯ್, ಇದೇ ತಿಂಗಳ 5ರ ರಾತ್ರಿ ಕೋರಮಂಗಲದಲ್ಲಿರುವ ಹ್ಯಾಪಿ ಟ್ರೋ ಪಬ್​ಗೆ ಹೋಗಿದ್ದಾರೆ. ಮದ್ಯ ಸೇವಿಸಿದ ಬಳಿಕ ಬಿಲ್ ವಿಚಾರವಾಗಿ ಪಬ್ ಮಾಲೀಕ ರಾಕೇಶ್ ಗೌಡನೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಕಲಿ ಇನ್ಸ್​ಪೆಕ್ಟರ್ ಆಗಿರಬಹುದು ಎಂದು ಭಾವಿಸಿದ ಮಾಲೀಕ ರಾಕೇಶ್, ಬೌನ್ಸರ್ ಕರೆಯಿಸಿ ಪಬ್​ನಲ್ಲಿ ಬೆಳಗಿನ ಜಾವದ ವರೆಗೂ ಕೂಡಿ ಹಾಕಿ ಹಲ್ಲೆ ನಡೆಸಿ, ಬಳಿಕ ಬಿಟ್ಟು ಕಳುಹಿಸಿದ್ದಾರೆ.

ಈ ಕುರಿತು ವಿನಯ್ ಕೋರಮಂಗಲ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಮಾಲೀಕ ರಾಕೇಶ್ ಗೌಡ ಹಾಗೂ ಬೌನ್ಸರ್​ಗಳು ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಸದ್ಯಕ್ಕೆ ಠಾಣಾ ಜಾಮೀನಿನ ಮೇರೆಗೆ ಆರೋಪಿಗಳು ಹೊರಬಂದಿದ್ದಾರೆ.

Last Updated : Nov 10, 2021, 10:22 PM IST

ABOUT THE AUTHOR

...view details