ಬೆಂಗಳೂರು: ಹೊಟೇಲ್ ಕ್ಯಾಷಿಯರ್ ಮೇಲೆ ಪೊಲೀಸರಿಂದ ಹಲ್ಲೆ ಪ್ರಕರಣ ಸಂಬಂಧ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸಪೆಟ್, ಓರ್ವ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕ್ಯಾಷಿಯರ್ ಮೇಲೆ ಹಲ್ಲೆ ಪ್ರಕರಣ: ಓರ್ವ ಕಾನ್‌ಸ್ಟೆಬಲ್ ಅಮಾನತು - ಬೆಂಗಳೂರು ಪೋಲಿಸರಿಂದ ಕ್ಯಾಷಿಯರ್ ಮೇಲೆ ಹಲ್ಲೆ
ಪುಟ್ಟೇನಹಳ್ಳಿಯ ಹೊಟೇಲ್‌ವೊಂದರ ಕ್ಯಾಷಿಯರ್ ಮೇಲೆ ಪೊಲೀಸರಿಂದ ಹಲ್ಲೆ ಪ್ರಕರಣ ಸಂಬಂಧ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಓರ್ವ ಕಾನ್ ಸ್ಟೇಬಲ್ ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪುಟ್ಟೇನಹಳ್ಳಿ ಠಾಣಾ ಪೊಲೀಸ್ ಕಾನ್‌ಸ್ಟೆಬಲ್ ಎಸ್.ಆರ್.ವಾಲೀಕರ್ ಅಮಾನತಿಗೆ ಒಳಗಾದವರು. ಪ್ರಕರಣದಲ್ಲಿ ಭಾಗಿಯಾಗಿದ್ದ ಹೋಮ್ ಗಾರ್ಡ್ ಗಿರೀಶ್ ಎಂಬಾತನನ್ನು ಈಗಾಗಲೇ ಸೇವೆಯಿಂದ ವಜಾಗೊಳಿಸಲಾಗಿದೆ. ಫೆಬ್ರವರಿ 10ರಂದು ರಾತ್ರಿ ಪುಟ್ಟೇನಹಳ್ಳಿಯ ಹೊಟೇಲ್ ವೊಂದರ ಕ್ಯಾಷಿಯರ್ ಆಗಿದ್ದ ಅಭಿ ಎಂಬುವವರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ ಸಹ ವೈರಲ್ ಆಗಿತ್ತು. ಪ್ರಕರಣದ ಕುರಿತು ವರದಿ ನೀಡುವಂತೆ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿಗೆ ಸೂಚಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಪೊಲೀಸ್ ಸಿಬ್ಬಂದಿಯ ತಪ್ಪು ಕಂಡು ಬಂದ ಹಿನ್ನೆಲೆಯಲ್ಲಿ ಇಲಾಖಾ ತನಿಖೆ ಪೂರ್ಣಗೊಳ್ಳುವವರೆಗೂ ಅಮಾನತಿನಲ್ಲಿರಲು ಆದೇಶ ಹೊರಡಿಸಿದ್ದಾರೆ.
TAGGED:
ಕ್ಯಾಷಿಯರ್ ಮೇಲೆ ಹಲ್ಲೆ ಪ್ರಕರಣ