ಕರ್ನಾಟಕ

karnataka

ETV Bharat / city

ಕಂಟೈನ್‌ಮೆಂಟ್‌ ಝೋನ್​ನಿಂದ ಬಂದ ವ್ಯಕ್ತಿಯ ಮೇಲೆ ಹಲ್ಲೆ: ಗಂಡ-ಹೆಂಡತಿ ಎಸ್ಕೇಪ್

ಕಂಟೈನ್‌ಮೆಂಟ್‌ ವಲಯದಿಂದ ಮರಳಿ ಮನೆಗೆ ಬಂದ ವ್ಯಕ್ತಿಯ ಮೇಲೆ ಪಕ್ಕದ ಮನೆಯರುವ ಹಲ್ಲೆನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.

assault-on-a-person-from-the-containment-zone
ವ್ಯಕ್ತಿಯ ಮೇಲೆ ಹಲ್ಲೆ

By

Published : Aug 11, 2020, 10:39 PM IST

ಬೆಂಗಳೂರು : ಕಂಟೈನ್‌ ಮೆಂಟ್‌ ವಲಯದಿಂದ ಬಂದ ಕಾರಣ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ನೂರ್ ಅಹ್ಮದ್ ಹಲ್ಲೆಗೊಳಗಾದ ವ್ಯಕ್ತಿ. ವಿದ್ಯಾರಣ್ಯಪುರದಲ್ಲಿ ವಾಸವಾಗಿರುವ ನೂರ್ ಅಹ್ಮದ್, ಪತ್ನಿಗೆ ಮದುಮೇಹ ಇದ್ದ ಕಾರಣ, ವಿದ್ಯಾರಣ್ಯಪುರದ ರಾಜೀವ್ ಗಾಂಧಿ ನಗರದಲ್ಲಿರುವ ಅಕ್ಕನ ಮನೆಗೆ ಹೋಗಿದ್ದರು‌‌. ಆದ್ರೆ ಸ್ವಲ್ಪ ದಿನಗಳ ನಂತರ ಆ ಏರಿಯಾದಲ್ಲಿ ಕೊರೊನಾ ಕೇಸ್ ಪತ್ತೆಯಾದ ಕಾರಣ ಸೀಲ್​ಡೌನ್​ ಮಾಡಲಾಗಿತ್ತು. ಇದರಿಂದ ನೂರ್ ಕುಟುಂಬ ಲಾಕ್ ಆಗಿತ್ತು.‌ ಹಾಕಿಕೊಳ್ಳಲು ಬಟ್ಟೆಯಿಲ್ಲದ ಕಾರಣ, ಮನೆ ಹೇಗಿದ್ದರೂ ಹತ್ತಿರ ಎಂದು ಮಕ್ಕಳನ್ನು ಮನೆಗೆ ಕಳುಹಿಸಿದ್ದರು.

ಈ ವೇಳೆ ಪಕ್ಕದ ಮನೆಯವರಾದ ಅಮಾನುಲ್ಲಾ ಹಾಗೂ ಆತನ ಪತ್ನಿ ಶಭಾನಾ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆಯಲು ಮುಂದಾಗಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, ನೀವು ಕಂಟೈನ್‌ಮೆಂಟ್‌ ​ ಜೋನ್​ನಿಂದ ಬಂದಿದ್ದೀರಾ? ‌ಮೊದಲು ಖಾಲಿ ಮಾಡಿಕೊಂಡು ಹೋಗಿ ಎಂದು ಬೆದರಿಕೆ ಹಾಕಿದ್ದಾರೆ.

ಈ ವಿಚಾರ ನೂರ್​ ಅಹ್ಮದ್​ಗೆ ತಿಳಿಯುತ್ತಿದ್ದಂತೆ ಅವರು ಸ್ಥಳಕ್ಕೆ ಬಂದಿದ್ದಾರೆ. ಅಮಾನುಲ್ಲಾನನ್ನು ಪ್ರಶ್ನಿಸಲು ಮುಂದಾದಾಗ ನೂರ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ನೀವೆಲ್ಲಾ ಕಂಟೈನ್‌ಮೆಂಟ್ ಜೋನ್‌ನಿಂದ ಬಂದವರು ಬದುಕಿರಬಾರದು ಎಂದು ಹೇಳಿ, ಮನೆಯಲ್ಲಿದ್ದ ಚಾಕು ತಂದು ಕುತ್ತಿಗೆ ಭಾಗಕ್ಕೆ ಇರಿದಿದ್ದಾರೆ.

ಇನ್ನು ಜಗಳ ಬಿಡಿಸಲು ಬಂದಿದ್ದ ವ್ಯಕ್ತಿ ಸಿರಾಜ್ ಎನ್ನುವವನಿಗೂ ಚಾಕುವಿನಿಂದ ಇರಿದಿದ್ದಾರೆ. ಸದ್ಯ ತೀವ್ರ ಗಾಯಗೊಂಡಿರುವ ನೂರ್ ಹಾಗೂ ಸಿರಾಜ್ ಅಪೇಕ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಮಾನುಲ್ಲಾ ಹಾಗೂ ಶಭಾನಾ ದಂಪತಿಗಳು ಪರಾರಿಯಾಗಿದ್ದಾರೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ABOUT THE AUTHOR

...view details