ಬೆಂಗಳೂರು: ಕೊರೊನಾ ಯಾವಾಗ ಹೆಚ್ಚು ಕಡಿಮೆ ಆಗುತ್ತೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಎಷ್ಟು ತಯಾರಿ ಇದ್ರೂ ಸಾಲಲ್ಲ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ನಮ್ಮ ವ್ಯವಸ್ಥೆಯಿಂದ ಪರೀಕ್ಷೆ ನಡೆಯುತ್ತಿದೆ. ಎಲ್ಲೋ ಒಂದು ಕಡೆ ಕೊರೊನಾ ಪ್ರಕರಣಗಳಲ್ಲಿ ಏರು ಪೇರು ಆಗಬಹುದು. ತಜ್ಞರು ಅಭಿಪ್ರಾಯಗಳನ್ನು ಒಬ್ಬರು ಒಂದೊಂದು ರೀತಿಯಲ್ಲಿ ಕೊಡ್ತಾ ಇದ್ದಾರೆ. ಕೆಲವರು ಈ ತಿಂಗಳಲ್ಲಿ ಹೆಚ್ಚು ಆಗುತ್ತೆ ಎಂದು ಹೇಳುತ್ತಾರೆ. ಮತ್ತೆ ಕೆಲವರು ಮುಂದಿನ ತಿಂಗಳು ಹೆಚ್ಚಾಗುತ್ತೆ ಎನ್ನುತ್ತಾರೆ. ಹೀಗಾಗಿ ನಾವು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಖಂಡಿತ ನಮ್ಮ ಮುಂದೆ ಸವಾಲು ಇದೆ, ಇಲ್ಲ ಅಂದ್ರೆ ತಪ್ಪು ಆಗುತ್ತದೆ. ಆದರೆ ಸೋಂಕನ್ನು ಬೇಗ ಪತ್ತೆ ಮಾಡುವ ಕೆಲಸ ನಡೆಯುತ್ತಿದೆ. 95% ಜನರಿಗೆ ಎ ಸಿಂಪ್ಟ್ ಮ್ಯಾಟಿಕ್ ಇದ್ದು, ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಕೇವಲ 5% ಸೋಂಕಿತರಿಗೆ ಸಮಸ್ಯೆ ಇದೆ. ಆ 5% ಜನರಿಗೆ ಬೇಗ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.