ಕರ್ನಾಟಕ

karnataka

ETV Bharat / city

50 ಸಾವಿರ ಬಡ ಕುಟುಂಬಗಳಿಗೆ ಆರೋಗ್ಯ ವರ್ಧಕ ಕಿಟ್ ವಿತರಣೆ.. - ಮಾರತಹಳ್ಳಿ ಬಿಜೆಪಿ ಕಚೇರಿ

ಈ ಔಷಧಗಳನ್ನು ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಕೊರೊನಾ ವೈರಸ್ ಹರಡದಂತೆ ತಡೆಯಲು ಇದರಿಂದ ಸಾಧ್ಯ. ಹಾಗೂ 15 ಸಾವಿರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ.

arvind-limbaveli-distributes-health-food-kit-to-50-thousand-families
50 ಸಾವಿರ ಕುಟುಂಬಗಳಿಗೆ ಆರೋಗ್ಯ ವರ್ಧಕ ಕಿಟ್ ವಿತರಿಸಿದ ಅರವಿಂದ ಲಿಂಬಾವಳಿ

By

Published : Jun 7, 2020, 5:59 PM IST

Updated : Jun 7, 2020, 7:37 PM IST

ಮಹದೇವಪುರ :ತಮ್ಮ ಕ್ಷೇತ್ರದಲ್ಲಿ ಶಾಸಕ ಅರವಿಂದ ಲಿಂಬಾವಳಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಶ್ರೀಶ್ರೀ ತತ್ವ ಆರೋಗ್ಯ ವರ್ಧಕ ಕಿಟ್‌ಗಳನ್ನ ವಿತರಿಸುತ್ತಿದ್ದಾರೆ.

50 ಸಾವಿರ ಬಡ ಕುಟುಂಬಗಳಿಗೆ ಆರೋಗ್ಯ ವರ್ಧಕ ಕಿಟ್ ವಿತರಣೆ..

ಮಾರತಹಳ್ಳಿಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡ ಅರುಣ್‌ ಕುಮಾರ್‌ ಅವರೊಂದಿಗೆ ಸೇರಿ ಶಾಸಕ ಅರವಿಂದ ಲಿಂಬಾವಳಿ ಅವರು ಶ್ರೀಶ್ರೀ ತತ್ವ ಆರೋಗ್ಯ ಟ್ರಸ್ಟ್ ವತಿಯಿಂದ ತಯಾರಾದ ರೋಗ ನಿರೋಧಕ ಶಕ್ತಿ ಔಷಧ ಹಾಗೂ ದೇಹದ ಶಕ್ತಿ ವೃದ್ಧಿಸುವ ಔಷಧ ಕಿಟ್‌ಗಳನ್ನು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಲಿಂಬಾವಳಿ ಅವರು, ನಾನು ಮತ್ತು ನಮ್ಮ ಪಕ್ಷದ ಮುಖಂಡರು ವೆಚ್ಚ ಮಾಡಿ ಬಡ ವೃದ್ಧರಿಗೆ ಹಾಗೂ ಮಕ್ಕಳಿಗೆ ಇವುಗಳನ್ನ ವಿತರಿಸುತ್ತಿದ್ದೇವೆ. ಮೊದಲಿಗೆ ಭೂತ್ ನಂಬರ್ 314ರಲ್ಲಿ ಚೌಡೇಶ್ವರಿ ದೇವಸ್ಥಾನದ ಬಳಿಯ ಬಡ ಕುಟುಂಬಗಳಿಗೆ ಕಿಟ್‌ಗಳನ್ನು ವಿತರಿಸಲು ಪ್ರಾರಂಭಿಸಿದ್ದೇವೆ. 15 ದಿನಗಳಲ್ಲಿ 50 ಸಾವಿರ ಕುಟುಂಬಗಳಿಗೆ ಔಷಧ ಕಿಟ್‌ಗಳನ್ನು ನೀಡಲಿದ್ದೇವೆ ಎಂದರು.

ಈ ಔಷಧಗಳನ್ನು ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಕೊರೊನಾ ವೈರಸ್ ಹರಡದಂತೆ ತಡೆಯಲು ಇದರಿಂದ ಸಾಧ್ಯ. ಹಾಗೂ 15 ಸಾವಿರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸುತ್ತಿರೋದಾಗಿ ಹೇಳಿದರು. ಶ್ರೀಶ್ರೀ ತತ್ವ ಕಿಟ್‌ಗಳಲ್ಲಿ ಫೇಸ್ ಮಾಸ್ಕ್, ಹ್ಯಾಂಡ್ ಸಾನಿಟೈಜರ್, ಅಮೃತ ಇಮ್ಯುನೊ ಮಾಡ್ಯುಲೇಟರ್, ಶಕ್ತಿ ಡ್ರಾಪ್ಸ್‌ ಇಮ್ಯುನಿಟಿ ಬಿಲ್ಡರ್, ತುಲಸಿ, ಟರ್ಮರಿಕ್‌ ಪ್ಲಸ್ ಸೇರಿ ಹಲವಾರು ದೈನಂದಿನ ವಸ್ತುಗಳು ಇವೆ ಎಂದರು.

Last Updated : Jun 7, 2020, 7:37 PM IST

ABOUT THE AUTHOR

...view details