ಮಹದೇವಪುರ (ಬೆಂಗಳೂರು): ಮಹದೇವಪುರ ಕ್ಷೇತ್ರದ 8 ವಾರ್ಡ್‌ಗಳಲ್ಲಿ ಕೋವಿಡ್ ಕೇರ್ ಸೆಂಟರ್ ಹಾಗು ಟ್ರಯಾಜ್ ಸೆಂಟರ್ಗಳನ್ನು ಅರಣ್ಯ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.
ಮಹದೇವಪುರ ಕ್ಷೇತ್ರದ ಕಾಡುಗೋಡಿ, ಹಗದೂರು, ಹೂಡಿ, ಗರುಡಾಚಾರ್ ಪಾಳ್ಯ, ದೊಡ್ಡನೆಕ್ಕುಂದಿ, ಮಾರತಹಳ್ಳಿ, ಬೆಳ್ಳಂದೂರು ವಾರ್ಡ್‌ಗಳಲ್ಲಿ ವಾರ್ಡ್ ಮಟ್ಟದ ಡೆಟರ್ ಕಮಿಟಿಯನ್ನು ಪ್ರಾಂಭಿಸಿ, ಗ್ರೂಪ್ 'ಎ' ಮತ್ತು 'ಬಿ' ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಪಾಲಿಕೆ ಅಧಿಕಾರಿಗಳು, ಇತರೆ ಸರ್ಕಾರಿ ಅಧಿಕಾರಿಗಳು ಹಾಗು 60 ಸ್ವಯಂ ಸೇವಕರುಗಳು ಈ ಡೆಟರ್ ಕಮಿಟಿಯ ಸದಸ್ಯರುಗಳಾಗಿರುತ್ತಾರೆ. ವಾರ್ಡ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲಾ ವೈದ್ಯರ ಸೇವೆಯನ್ನು ಸಹ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.
ನಂತರ ಮಾತನಾಡಿದ ಸಚಿವ ಲಿಂಬಾವಳಿ, ವಾರ್ಡ್ನಲ್ಲಿರುವ ಪಾಲಿಕೆ ಕಚೇರಿಗಳೇ ವಾರ್ ರೂಮ್ಗಳಾಗಿ ಕೆಲಸ ನಿರ್ವಹಿಸಲಿವೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಪ್ರತಿನಿತ್ಯ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿ ನೇಮಿಸಲಾಗಿದೆ. ಕ್ಷೇತ್ರದ ಪ್ರತಿಯೊಂದು ಕೋವಿಡ್ ಕೇರ್ ಸೆಂಟರ್ ಮತ್ತು ಟ್ರಯಾಜ್ ಸೆಂಟರ್‌ಗಳಲ್ಲಿ ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಚಿಕಿತ್ಸೆ, ವೈದ್ಯಕೀಯ ಸೌಲಭ್ಯ ಒದಗಿಸಲು ಬದ್ದರಾಗಿದ್ದೇವೆ ಎಂದರು.