ಬೆಂಗಳೂರು: ಸಂಕಷ್ಟದ ಪರಿಸ್ಥಿತಿಯಲ್ಲಿರುವ ಸಾಹಿತಿ/ಕಲಾವಿದರು ಮತ್ತು ವಿಧವಾ ಮಾಸಾಶನ (Artists, Widow Pension Scheme) ಯೋಜನೆಯ 2021ನೇ ಸಾಲಿನ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಿಗೆ ಸಂಬಂಧಿಸಿದಂತೆ 6.25 ಕೋಟಿ ರೂ. ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.
ಸಾಹಿತಿ, ಕಲಾವಿದರ ಮಾಸಾಶನ ಯೋಜನೆ: ಸರ್ಕಾರದಿಂದ ಅನುದಾನ ಬಿಡುಗಡೆ - ಮಸಾಶನಕ್ಕೆ ಅನುದಾನ ಬಿಡುಗಡೆ
ಸಾಹಿತಿ/ಕಲಾವಿದರು ಮತ್ತು ವಿಧವಾ ಮಾಸಾಶನ ಯೋಜನೆಯಡಿ (Artists, Widow Pension Scheme) 6.25 ಕೋಟಿ ರೂ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
2021ನೇ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಿಗೆ ಮಾಸಾಶನ/ವಿಧವಾ ಮಾಸಾಶನ (Artists Pension Scheme) ಪಾವತಿಗೆ ಒಟ್ಟು 6.84 ಕೋಟಿ ರೂ. ಬೇಕಾಗಿರುತ್ತದೆ. ಎರಡನೇ ಕಂತಿನಲ್ಲಿ ಬಿಡುಗಡೆಯಾದ ಅನುದಾನದಲ್ಲಿ 1.09 ಕೋಟಿ ರೂ. ಉಳಿಕೆಯಾಗಿರುತ್ತದೆ. ಹೀಗಾಗಿ ಮೂರನೇ ಕಂತಿನಲ್ಲಿ 6.25 ಕೋಟಿ ರೂ. ಬಿಡುಗಡೆ ಮಾಡಿದಲ್ಲಿ ಎರಡನೇ ಕಂತಿನ ಉಳಿಕ ಅನುದಾನವನ್ನೂ ಸೇರಿಸಿ ಒಟ್ಟು ಮೂರು ತಿಂಗಳುಗಳಿಗೆ ಮಾಸಾಶನ/ವಿಧವಾ ಮಾಸಾಶನ ಪಾವತಿಗೆ ಅನುದಾನವನ್ನು ಬಿಡುಗಡೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋರಿತ್ತು.
ಈ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಮಾಸಾಶನ/ವಿಧವಾ ಮಾಸಾಶನ ಪಾವತಿ ಅನುದಾನವನ್ನು ಬಿಡುಗಡೆ ಮಾಡಲು ಹಂಚಿಕೆ ಮಾಡಿರುವ 25 ಕೋಟಿ ರೂ. ಅನುದಾನದಿಂದ 6.25 ಕೋಟಿ ರೂ. ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವಂತೆ ಕೋರಿತ್ತು. ಅದರಂತೆ ಇದೀಗ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.