ಕರ್ನಾಟಕ

karnataka

ETV Bharat / city

ಪೊಲೀಸ್ ಎಂದು ಹೇಳಿಕೊಂಡು ವರ್ತಕರಿಂದ ಹಣ ವಸೂಲಿ ಮಾಡುತ್ತಿದ್ದ ಟೀ ಮಾರಾಟಗಾರ ಅರೆಸ್ಟ್ - ಪೊಲೀಸ್ ಎಂದು ಹೇಳಿಕೊಂಡು ವರ್ತಕರಿಂದ ಹಣ ವಸೂಲಿ ಮಾಡುತ್ತಿದ್ದ ಟೀ ಮಾರಾಟಗಾರ ಅಂದರ್

ಹೀಗೆ ಹಲವು ತಿಂಗಳಿಂದ ಪೊಲೀಸರ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಕೆಆರ್‌ಮಾರ್ಕೆಟ್ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ..

arrested-a-tea-vendor-claiming-to-be-a-policeman
ಪೊಲೀಸ್ ಎಂದು ಹೇಳಿಕೊಂಡು ವರ್ತಕರಿಂದ ಹಣ ವಸೂಲಿ ಮಾಡುತ್ತಿದ್ದ ಟೀ ಮಾರಾಟಗಾರ ಅರೆಸ್ಟ್

By

Published : Feb 25, 2022, 1:53 PM IST

ಬೆಂಗಳೂರು :ಪೊಲೀಸ್ ಎಂದು ಹೇಳಿಕೊಂಡು ವರ್ತಕರಿಂದ ಹಣವಸೂಲಿ‌ ಮಾಡುತ್ತಿದ್ದ ಟೀ‌ ಮಾರಾಟಗಾರನನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಶ್ರೀರಾಮಪುರ ನಿವಾಸಿ ವಿಘ್ನೇಶ್(23) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.

ಹಲವು ವರ್ಷಗಳಿಂದ ಸಿಟಿ ಮಾರ್ಕೆಟ್, ಹಲಸೂರು ಗೇಟ್ ಹಾಗೂ ಚಿಕ್ಕಪೇಟೆ ಸೇರಿದಂತೆ ಹಲವೆಡೆ ಬೆಳಗ್ಗೆ ಅವಧಿಯಲ್ಲಿ ಟೀ ಮಾರಾಟ ಮಾಡುತ್ತಿದ್ದ.‌ ಈ ವೇಳೆ ಹಲವು ವ್ಯಾಪಾರಿಗಳ ಹಾಗೂ ವರ್ತಕರ ಅಂಗಡಿಗಳನ್ನು ಗುರುತಿಸಿಕೊಂಡಿದ್ದ.

ತದನಂತರ ಮಧ್ಯಾಹ್ನ ವೇಳೆ‌‌ ವ್ಯಾಪಾರಿಗಳ ಬಳಿ ತೆರಳಿ ತಾನು ಪೊಲೀಸ್ ಕಾನ್‌ಸ್ಟೇಬಲ್ ಎಂದು ಪರಿಚಯಿಸಿಕೊಂಡು, ಹಣ ವಸೂಲಿ ಮಾಡುತ್ತಿದ್ದ. ಅಕ್ರಮವಾಗಿ ತಂಬಾಕು ವ್ಯಾಪಾರ ಮಾಡುತ್ತಿದ್ದೀರಾ ಎಂದು ಹೆದರಿಸಿ ಹಣ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.‌

ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ಮಾತನಾಡುತ್ತಿರುವುದು..

ಹೀಗೆ ಹಲವು ತಿಂಗಳಿಂದ ಪೊಲೀಸರ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಕೆಆರ್‌ಮಾರ್ಕೆಟ್ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಓದಿ :ರಷ್ಯಾ ಒಂದು ವೇಳೆ ನ್ಯಾಟೋ ದೇಶಗಳ ತಂಟೆಗೆ ಬಂದ್ರೆ ನಮ್ಮ ಮಧ್ಯಪ್ರವೇಶ ಖಚಿತ: ಬೈಡನ್‌

ABOUT THE AUTHOR

...view details