ಬೆಂಗಳೂರು: ಗೃಹ ಸಚಿವರ ವಿರುದ್ದ ಷಡ್ಯಂತ್ರ ರೂಪಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಸಿಐಡಿ ಸೈಬರ್ ವಿಭಾಗದ ಪೊಲೀಸರು 'ಪೋಸ್ಟ್ ಕಾರ್ಡ್' ವೆಬ್ ಪೋರ್ಟಲ್ ಸಂಪಾದಕರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಗೃಹ ಸಚಿವರ ವಿರುದ್ದ ಷಡ್ಯಂತ್ರ, ವೆಬ್ ಪೋರ್ಟಲ್ ಸಂಪಾದಕ ಅರೆಸ್ಟ್ - undefined
ರಾಜ್ಯದ ಗೃಹ ಸಚಿವರ ವಿರುದ್ಧ ಷಡ್ಯಂತ್ರ ಪ್ರಕರಣ ಸಂಬಂಧ ಖಾಸಗಿ ವೆಬ್ ಪೋರ್ಟಲ್‌ನ ಸಂಪಾದಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವೆಬ್ ಪೋರ್ಟಲ್ ಸಂಪಾದಕನ ಬಂಧನ
ಸಂಪಾದಕ ಮಹೇಶ್ ಹೆಗಡೆ ಬಂಧಿತ ವ್ಯಕ್ತಿ. ಇವರು ಗೃಹ ಸಚಿವ ಎಂಬಿ ಪಾಟೀಲ್ ಅವರ ನಕಲಿ ಲೆಟರ್ ಹೆಡ್ ಬಳಸಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಪತ್ರದಲ್ಲಿ ಲಿಂಗಾಯಿತ ಧರ್ಮ ವಿಭಜನೆ ಮಾಡುವಂತೆ ಉಲ್ಲೇಖಿಸಲಾಗಿದೆ. ಈ ಕುರಿತು ಮಾಹಿತಿ ಪಡೆದ ಎಂಬಿ. ಪಾಟೀಲ್, ವಿಜಯಪುರದ ಅದರ್ಶನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೀಗ ಸಿಐಡಿ ಪೊಲೀಸರು ಪೋರ್ಟಲ್ ಸಂಪಾದಕರ ವಿರುದ್ಧ ಕ್ರಮ ಜರುಗಿಸಿದ್ದಾರೆ.