ಆನೇಕಲ್(ಬೆಂಗಳೂರು):ರಕ್ತ ಚಂದನ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ತಾಲೂಕಿನ ಸರ್ಜಾಪುರದ ಬಷೀರ್ ಅಹಮದ್, ಅಡಿಗಾರ ಕಲ್ಲಹಳ್ಳಿಯ ನಿಜಾಮ್ ಹಾಗೂ ತೌಷಿದ್ ಬಂಧಿತ ಆರೋಪಿಗಳು.
ಆರೋಪಿಗಳು ಕರ್ನಾಟಕದ ಗಡಿ ತಮಿಳುನಾಡಿನ ಬಾಗಲೂರಿನಿಂದ ಬೆಂಗಳೂರಿಗೆ ವಾಹನದಲ್ಲಿ ಅಕ್ರಮವಾಗಿ ರಕ್ತ ಚಂದನವನ್ನ ಸಾಗಣೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಹೆಬ್ಬಗೋಡಿ ಪೊಲೀಸರ ತಂಡ ಬೊಮ್ಮಸಂದ್ರದ ಬಳಿ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.