ಕರ್ನಾಟಕ

karnataka

ETV Bharat / city

ಸಿನಿಮಾ ಶೈಲಿ ಹಣ ದೋಚಿ ಪರಾರಿಯಾಗಿದ್ದ ಮೂವರು ಖದೀಮರು ಅರೆಸ್ಟ್​.. - Arrest news

ಸಿನಿಮಾ ಶೈಲಿಯಲ್ಲಿ ಕೋಟಿ ಹಣವನ್ನ ದೋಚಿ ಪಾರಾರಿಯಾಗಿದ್ದ ಖದೀಮರನ್ನು ಕೊನೆಗೂ ಬಂಧಿಸುವಲ್ಲಿ ಆರ್‌ಎಂಸಿ ಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೆಸ್ಟ್​

By

Published : Oct 11, 2019, 8:10 PM IST

Updated : Oct 11, 2019, 9:28 PM IST

ಬೆಂಗಳೂರು: ಸಿನಿಮಾ ಶೈಲಿಯಲ್ಲಿ ಕೋಟಿ ಹಣವನ್ನ ದೋಚಿ ಪಾರಾರಿಯಾಗಿದ್ದ ಖದೀಮರನ್ನು ಕೊನೆಗೂ ಬಂಧಿಸುವಲ್ಲಿ ಆರ್‌ಎಂಸಿ ಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.

ದಾದಾಪೀರ್, ಗಣೇಶ, ಕಿಶೋರ ಬಂಧಿತ ಆರೋಪಿಗಳು. ದಾವಣಗೆರೆ ಮೂಲದ ಉದ್ಯಮಿ ಕೆ ವಿ ಆರ್ ರೆಡ್ಡಿಯವರು ಕಾರಿನಲ್ಲಿ ಒಂದುವರೆ ಕೋಟಿ ಹಣವನ್ನ ಇಟ್ಟುಕೊಂಡು ಪ್ರಯಾಣ ಮಾಡಿದ್ದರು. ಈ ವೇಳೆ ದುಷ್ಕರ್ಮಿಗಳ ತಂಡ ಗೊರಗುಂಟೆಪಾಳ್ಯದ ತಾಜ್ ವಿವಾಂತ ಬಳಿ ಕಾರು ಅಡ್ಡಗಟ್ಟಿ ಹಣ ದೋಚಿ ಪರಾರಿಯಾಗಿದ್ದರು. ತಕ್ಷಣ ಉದ್ಯಮಿ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಪ್ರಕರಣ ಗಂಭೀರವಾದ ಕಾರಣ ನಗರ ಆಯುಕ್ತರು ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಇದೀಗ ತ‌ನಿಖೆ ಆರಂಭಿಸಿದ ಸಿಸಿಬಿ‌ ಪೊಲೀಸರು ಉದ್ಯಮಿಯ ಕಾರು ಚಾಲಕನ ಗಣೇಶನ ಮೇಲೆ ಅನುಮಾನ ಬಂದು ತನಿಖೆ ನಡೆಸಿದ್ದಾಗ ಸತ್ಯಾಂಶ ಬಾಯಿಬಿಟ್ಟಿದ್ದಾನೆ.

ಕಾರು ಚಾಲಕ ಗಣೇಶ್ ತನ್ನ ಸ್ನೇಹಿತ ದಾದಾಪೀರ್, ಕಿಶೋರ ಜೊತೆ ಸೇರಿ ಹಣ ಲೂಟಿ ಮಾಡಿದ್ದಾನೆ. ಸದ್ಯ ಸಿಸಿಬಿ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿರುವ ಹಿನ್ನೆಲೆ ತನಿಖೆ ಮುಂದುವರೆದಿದೆ.

Last Updated : Oct 11, 2019, 9:28 PM IST

ABOUT THE AUTHOR

...view details