ಬೆಂಗಳೂರು: ಗ್ಯಾಸ್ ಕಟರ್ ಬಳಸಿ ರಾತ್ರೋರಾತ್ರಿ ಬಾರ್ನ ಕಿಟಕಿ ಸರಳು ಮುರಿದು ಒಳನುಗ್ಗಿ 90 ಸಾವಿರ ರೂ. ನಗದು ಕಳ್ಳತನ ಮಾಡಿದ್ದ ಖದೀಮನನ್ನು ಸಿ.ಕೆ.ಅಚ್ಚುಕಟ್ಟು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಇಟ್ಟಮಡು 2ನೇ ಹಂತದಲ್ಲಿರುವ ಮಂಜುನಾಥ ವೈನ್ ಸ್ಟೋರ್ ಮ್ಯಾನೇಜರ್ ವಿಶ್ವಕಾಂತ್ ಎಂಬುವರು ನೀಡಿದ ದೂರಿನ ಮೇರೆಗೆ ಖದೀಮ ಹರೀಶ್ ಎಂಬಾತನನ್ನು ಬಂಧಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ವೈನ್ ಸ್ಟೋರ್ ಮ್ಯಾನೇಜರ್ ಆಗಿರುವ ವಿಶ್ವಕಾಂತ್ ಮೇ 25 ರಂದು ಲಾಕ್ಡೌನ್ ಹಿನ್ನೆಲೆ ಬೆಳಗ್ಗೆ 10 ಗಂಟೆಗೆ ವ್ಯಾಪಾರ ಮುಗಿಸಿ ಸಂಗ್ರಹವಾಗಿದ್ದ ಸುಮಾರು 90 ಸಾವಿರ ರೂ. ಡ್ರಾಯರ್ನಲ್ಲಿ ಇಟ್ಟು ಬೀಗ ಹಾಕಿ ತೆರಳಿದ್ದರು.