ಬೆಂಗಳೂರು:ಅಕ್ರಮವಾಗಿ ರೌಡಿಶೀಟರ್‌ಗಳಿಗೆ ಹಾಗೂ ಇತರರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಶಸ್ತ್ರಾಸ್ತ್ರ ಪೂರೈಕೆದಾರರನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಿಂದ 7 ಪಿಸ್ತೂಲ್ಗಳು ಹಾಗೂ 19 ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿರುವುದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ಮೂಲದ ಅಯಾಜುಲ್ಲಾ, ಸೈಯದ್ ಸಿರಾಜ್, ಮಹಮದ್ ಅಲಿ, ಅರುಣ್ ಕುಮಾರ್ ಬಂಧಿತ ಆರೋಪಿಗಳು. ಈ ಮೂವರು ಉತ್ತರ ಪ್ರದೇಶದ ಶಾಮಲಿ, ಪಂಜಾಬ್‌ನ ಅಮೃತಸರ ಹಾಗೂ ಮಹಾರಾಷ್ಟ್ರದ ಶಿರಡಿಯಿಂದ ಅಕ್ರಮವಾಗಿ ಪಿಸ್ತೂಲ್‌ಗಳನ್ನು ತರಿಸಿಕೊಂಡು ಬೆಂಗಳೂರಲ್ಲಿ ರೌಡಿಶೀಟರ್‌ಗಳಿಗೆ ಮಾರಾಟ ಮಾಡುತ್ತಿದ್ದರು.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ:
ಈ ಹಿಂದೆ ನಗರದಲ್ಲಿ ರೌಡಿಶೀಟರ್‌ಗಳಿಗೆ ಅಕ್ರಮವಾಗಿ ಪಿಸ್ತೂಲ್, ಗನ್‌ಗಳ ಮಾರಾಟ ಪ್ರಕರಣಗಳ ಬಗ್ಗೆ ಸಿಸಿಬಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಈ ಮಧ್ಯೆ ಕೆಲ ದಿನಗಳ ಹಿಂದೆ ಅಯಾಜ್ ವುಲ್ಲಾ ಬಗ್ಗೆ ಮಾಹಿತಿ ಪಡೆದು ಆತನ ಚಲನವಲನಗಳ ಮೇಲೆ ನಿಗಾ ವಹಿಸಲಾಗಿತ್ತು. ಈತ ನೆರೆ ರಾಜ್ಯಗಳಿಂದ ಅಕ್ರಮವಾಗಿ ಪಿಸ್ತೂಲ್‌ಗಳನ್ನು ತಂದು ಬೆಂಗಳೂರಿನಲ್ಲಿ ಮರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ಇನ್ಸ್ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದ ಮಹಿಳಾ ಸಂರಕ್ಷಣಾ ದಳದ ತಂಡ ಎಲ್ಲಿಂದ ಪೂರೈಕೆಯಾಗುತ್ತಿದ್ದ ಎಂಬ ಮಾಹಿತಿ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಾಗಿ ಶೋಧ ಮುಂದುವರೆದಿದೆ ಎಂದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ಪ್ರಕರಣದ ಕಿಂಗ್‌ಪಿನ್ ಅಯಾಜ್‌ವುಲ್ಲಾ ತನ್ನ ಜಾಲವನ್ನು ಉತ್ತರ ಪ್ರದೇಶದ ಶಾಮಲಿ, ಪಂಜಾಬ್‌ನ ಅಮೃತಸರ, ಮಹಾರಾಷ್ಟ್ರದ ಶಿರಡಿಯಲ್ಲಿ ತನ್ನ ವಿಸ್ತರಿಸಿಕೊಂಡಿದ್ದು, ಕಡಿಮೆ ಮೊತ್ತಕ್ಕೆ ಪಿಸ್ತೂಲ್, ಗನ್, ರೈಫಲ್‌ಗಳನ್ನು ಖರೀದಿಸಿ ರೈಲು, ಬಸ್‌ಗಳ ಮೂಲಕ ತರುತ್ತಿದ್ದ. ಅವುಗಳನ್ನು ಇತರೆ ಆರೋಪಿಗಳಿಗೆ ಕೊಟ್ಟು ರೌಡಿಗಳು, ಅಕ್ರಮ ಚಟುವಟಿಕೆ ನಡೆಸುವವರಿಗೆ ಲಕ್ಷಾಂತರ ರೂ.ಗೆ ಮಾರಾಟ ಮಾಡುತ್ತಿದ್ದ. ಈತನ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಡಕಾಯಿತಿ ಹಾಗೂ ನಗರದ ಇತರೆ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಈತ ನೆರೆ ರಾಜ್ಯಗಳಿಂದ ಶಸ್ತ್ರಾಸ್ತ್ರಗಳನ್ನು ತಂದು ಇತರೆ ಆರೋಪಿಗಳಿಗೆ ಮಾರಾಟ ಮಾಡುತ್ತಿದ್ದ.
ಸೈಯದ್ ಸಿರಾಜ್ ಅಹಮ್ಮದ್ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈತ ಅಯಾಜ್ ವುಲ್ಲಾನಿಂದ 1 ಕಂಟ್ರಿಮೇಡ್ ಪಿಸ್ತೂಲ್ ಹಾಗೂ 1 ಕಂಟ್ರಿಮೇಡ್ ರೈಫೈಲ್ ಖರೀದಿಸಿದ್ದ. ಮತ್ತೊಬ್ಬ ಆರೋಪಿ ಮೊಹಮ್ಮದ್ ಅಲಿ ಶಿವಾಜಿನಗರ ಠಾಣೆ ರೌಡಿಶೀಟರ್ ಆಗಿದ್ದು, ಈತ ಅಯಾಜ್‌ನಿಂದ 1 ಕಂಟ್ರಿಮೇಡ್ ಪಿಸ್ತೂಲ್, ರೈಫಲ್ ಖರೀದಿಸಿದ್ದಾನೆ. ಅರುಣ್ ಕುಮಾರ್ ವಿರುದ್ಧ ಕೊರಟಗೆರೆ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿದೆ. ಈತ ಅಯಾಜ್‌ನಿಂದ ತನ್ನ ಏರಿಯಾದಲ್ಲಿನ ಜನರಿಗೆ ಹೆದರಿಸುವ ಸಲುವಾಗಿ ಒಂದು ಕಂಟ್ರಿಮೆಡ್ ಗನ್ ಖರೀದಿಸಿದ್ದ ಎಂದು ಸಂದೀಪ್ ಪಾಟೀಲ್ ಹೇಳಿದರು.
ಮೂವರು ಸಹೋದರರಿಂದ ದಂಧೆ:
ಅಯಾಜ್‌ವುಲ್ಲಾ ನೆರೆ ರಾಜ್ಯಗಳಿಂದ ತರುತ್ತಿದ್ದ ಕಂಟ್ರಿಮೆಡಿ ಪಿಸ್ತೂಲ್, ಗನ್, ರೈಫಲ್‌ಗಳನ್ನು ನಗರದ ರೌಡಿಗಳಿಗೆ ಒಂದು ಲಕ್ಷದಿಂದ ಮೂರು ಲಕ್ಷ ರೂ.ವರೆಗೆ ಮಾರಾಟ ಮಾಡುತ್ತಿದ್ದ. ಅಲ್ಲದೆ, ಈ ಅಕ್ರಮ ಶಸ್ತ್ರಾಾಸ್ತ್ರ ದಂಧೆಯಲ್ಲಿ ಅಯಾಜ್‌ವುಲ್ಲಾ ಮಾತ್ರವಲ್ಲದೆ, ಆತನ ಇಬ್ಬರು ಸಹೋದರರಾದ ಫಯಾಜ್‌ವುಲ್ಲಾ ಮತ್ತು ನಯ್‌ಜ್‌ವುಲ್ಲಾ ಕೂಡ ಭಾಗಿಯಾಗಿದ್ದಾರೆ ಎಂಬುದು ಪತ್ತೆಯಾಗಿದೆ. ಫಯಾಜ್‌ವುಲ್ಲಾ ನೆರೆ ರಾಜ್ಯದ ಕಂಟ್ರಿಮೇಡ್ ಪಿಸ್ತೂಲ್ ಉತ್ಪಾದಕ ದಂಧೆಕೋರರ ಜತೆ ನೇರ ಸಂಪರ್ಕದಲ್ಲಿದ್ದು, ಆತನೇ ಕಿಂಗ್‌ಪಿನ್ ಆಗಿದ್ದಾನೆ. ಆತ ಸೂಚನೆ ಮೇರೆಗೆ ಅಯಾಜ್‌ವುಲ್ಲಾಾ ನಗರಕ್ಕೆ ಶಸ್ತ್ರಾಸ್ತ್ರ ತಂದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Video- ಹಣ ಕದಿಯಲು ಬಂದು ಎಟಿಎಂ ಹಿಂದೆ ಅವಿತುಕೊಂಡ ಖದೀಮ.. ಮುಂದಾಗಿದ್ದೇನು?