ಬೆಂಗಳೂರು: ಪಾಂಗೋಲಿನ್ ಚಿಪ್ಪಂದಿ ಮತ್ತದರ ಚಿಪ್ಪುಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಹಾಲಕ್ಷೀ ಲೇಔಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಾಂಗೋಲಿನ್ ಚಿಪ್ಪಂದಿಯ ಚಿಪ್ಪು ಮಾರಾಟ ಮಾಡ್ತಿದ್ದ ಖದೀಮರು ಅರೆಸ್ಟ್ - Arrest of accused for selling shellPig
ಪಾಂಗೋಲಿನ್ ಚಿಪ್ಪಂದಿ ಎಂಬ ಪ್ರಾಣಿಯನ್ನ ಅದರ ಚಿಪ್ಪುಗಳನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅರೋಪಿಗಳನ್ನು ಮಹಾಲಕ್ಷೀ ಲೇಔಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
![ಪಾಂಗೋಲಿನ್ ಚಿಪ್ಪಂದಿಯ ಚಿಪ್ಪು ಮಾರಾಟ ಮಾಡ್ತಿದ್ದ ಖದೀಮರು ಅರೆಸ್ಟ್](https://etvbharatimages.akamaized.net/etvbharat/prod-images/768-512-4132978-thumbnail-3x2-chai.jpg)
ಚಿಪ್ಪಂದಿಯ ಚಿಪ್ಪು
ಮುನಿವೆಂಕಟಪ್ಪ, ಗೌತಮ್ ಬಂಧಿತ ಆರೋಪಿಗಳು. ಇವ್ರು ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಕಮಲಮ್ಮನ ಗುಂಡಿ ಆಟದ ಮೈದಾನದ ಹತ್ತಿರ ಪಂಗೋಲಿನ್ ಚಿಪ್ಪಂದಿ ಹಾಗೂ ಅದರ ಚಿಪ್ಪುಗಳನ್ನ ಅಕ್ರಮವಾಗಿ ಮಾರಾಟ ಮಾಡ್ತಿದ್ರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳ ವಶದಲ್ಲಿದ್ದ ಚಿಪ್ಪುಗಳನ್ನ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಹಾಗೆ ಈ ಆರೋಪಿಗಳು ಎಲ್ಲಿಂದ ತಂದು ಮಾರಾಟ ಮಾಡುತ್ತಿದ್ರು ಅನ್ನೋದರ ಬಗ್ಗೆ ವಿಚಾರಣೆ ನಡೆಸಿದ್ದಾರೆ.