ಬೆಂಗಳೂರು:ಕೊರೊನಾ ಲಾಕ್ಡೌನ್ಗೂ ಕೇರ್ ಮಾಡದೆ ಜೂಜಾಟದಲ್ಲಿ ನಿರತರಾಗಿದ್ದ ಜನರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಲಿಖಿತ್, ಆನಂತಕುಮಾರ್, ನಾಗೇಂದ್ರ ಕುಮಾರ್, ಮುನಿಕೃಷ್ಣ, ಶ್ರೀನಿವಾಸ, ಶ್ರೀನಿವಾಸಲು, ಪ್ರಶಾಂತ್, ಮಂಜುನಾಥ, ಮಂಜೇಗೌಡ ಬಂಧಿತರು. ಇವರು ಯಲಹಂಕ-ಬಾಗಲೂರು ಕ್ರಾಸ್ನ ವಿನಾಯಕ ನಗರದ ಕೃಷ್ಣವೇಣಿ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಬಿಲ್ಡಿಂಗ್ನಲ್ಲಿ ಜೂಜಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಾಗಲೂರು ಠಾಣೆಯ ಇನ್ಸ್‌ಪೆಕ್ಟರ್ ಪ್ರಶಾಂತ್.ಆರ್.ವರ್ಣಿ ತಂಡ ಆರೋಪಿಗಳನ್ನು ಬಂಧಿಸಿದೆ.