ಬೆಂಗಳೂರು :ತಂಬಾಕು ಸೇವನೆಗೆ ಹುಕ್ಕಾ ಬಳಸಬಹುದಾಗಿದ್ದರೂ ಅದರ ಸೇವನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದು ನಿರ್ದಿಷ್ಟ ಜಾಗದಲ್ಲಿ ಸ್ಮೋಕಿಂಗ್ ಝೋನ್ ನಿರ್ಮಿಸಬೇಕು. ಇದರಿಂದ ಇತರರಿಗೆ ತೊಂದರೆಯಾಗಬಾರದು ಎಂದು ಹೈಕೋರ್ಟ್ ಆದೇಶಿಸಿದೆ.
ಅಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿರುವುದರಿಂದ ರೆಸ್ಟೋರೆಂಟ್ ಮಾಲೀಕರು ಬಿಬಿಎಂಪಿಯಿಂದ ಅಗತ್ಯ ಅನುಮತಿ ಪಡೆದು ಆನಂತರ ಹೊಗೆರಹಿತ ಹುಕ್ಕಾ ಸೇವನೆಗೆ ನಿರ್ದಿಷ್ಟ ಸ್ಮೋಕಿಂಗ್ ಝೋನ್ ರಚಿಸಬೇಕು ಎಂದು ಸ್ಪಷ್ಟಪಡಿಸಿದೆ. ಬಸವನಗುಡಿಯಲ್ಲಿರುವ ಸೋಹೋ ಪಬ್ ಅಂಡ್ ಗ್ರಿಲ್ ಹೆಸರಿನ ರೆಸ್ಟೋರೆಂಟ್ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.