ಕರ್ನಾಟಕ

karnataka

ETV Bharat / city

ನಮ್ಮ ಶಾಲೆ ನನ್ನ ಕೊಡುಗೆ: ದಾನಿಗಳಿಗಾಗಿ ಆ್ಯಪ್ ತರಲು ಮುಂದಾದ ಶಿಕ್ಷಣ ಇಲಾಖೆ - ಸರ್ಕಾರಿ ಶಾಲೆಗಳ ಅಭಿವೃದ್ಧಿ

ರಾಜ್ಯದ ಶಾಲೆಗಳಲ್ಲಿನ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಬುಧವಾರ ವಿವಿಧ ಸಂಘ ಸಂಸ್ಥೆಗಳ ಜೊತೆ ಶಿಕ್ಷಣ ಸಚಿವರು ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಿದರು.

app for donors from education department
ದಾನಿಗಳಿಗಾಗಿ ಆ್ಯಪ್ ತರಲು ಮುಂದಾದ ಶಿಕ್ಷಣ ಇಲಾಖೆ

By

Published : Feb 10, 2022, 10:32 AM IST

ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಅನೇಕ ಸಂಘ-ಸಂಸ್ಥೆಗಳು ಮಕ್ಕಳಿಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ. ಹೀಗಾಗಿ ಶಾಲೆಗಳ ಅಭಿವೃದ್ಧಿ ಮಾಡಬೇಕೆಂದು ಮನಸ್ಸು ಮಾಡುವವರಿಗೆ ಒಂದು ಆ್ಯಪ್ ತಂದು ವೇದಿಕೆ ತರಬೇಕೆಂದು ಯೋಚನೆ ಮಾಡುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.


ಈ ಅಪ್ಲಿಕೇಶನ್ನಿನ ಬೀಟಾ ಟೆಸ್ಟಿಂಗ್ ನಡೆಯುತ್ತಿದ್ದು ಫೆಬ್ರವರಿ 14ರಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ಕೊಡಲಿದ್ದಾರೆ. ಶಾಲೆಗೆ ಯಾರಾದರು ದಾನಿಗಳು ಹಣ ಕೊಡಬೇಕು ಎಂದೆನಿಸಿದರೆ ಈ ಆ್ಯಪ್ ಮೂಲಕ ಕೊಡಬಹುದು ಎಂದು ಸಚಿವರು ತಿಳಿಸಿದರು.

ಜನರಿಗೆ ಶಾಲೆಗಳಿಗೆ ದಾನ ಕೊಡಬೇಕು ಅಥವಾ ಅಭಿವೃದ್ಧಿ ಕಾರ್ಯ ಮಾಡಬೇಕು ಅನ್ನೋ ಭಾವನೆ ಇರುತ್ತದೆ. ಆದರೆ ಯಾವ ರೀತಿ, ಯಾರನ್ನು ಸಂಪರ್ಕಿಸಬೇಕು ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಆ್ಯಪ್​​ ಓಪನ್ ಮಾಡಿದರೆ ಯಾವ ಜಿಲ್ಲೆ, ತಾಲೂಕು, ಯಾವ ಶಾಲೆಗೆ ದಾನ ಕೊಡಬೇಕು ಎಂಬುದರ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಅವರು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿಶಾಲ್ ರಾವ್ ಮಾತನಾಡಿ, ಕರ್ನಾಟಕದಲ್ಲಿ 48 ಸಾವಿರ ಸರ್ಕಾರಿ ಶಾಲೆಗಳು ಇದ್ದು, ಒಂದೊಂದು ಶಾಲೆಯಲ್ಲಿ ಒಂದೊಂದು ರೀತಿಯ ಅವಶ್ಯಕತೆಗಳು ಇವೆ. ಕೆಲವು ಕಡೆ ಕೊಠಡಿ, ಶಿಕ್ಷಕರ ಅನಿವಾರ್ಯತೆ ಇರುತ್ತದೆ. ಮಕ್ಕಳಿಗೆ ಒಂದು ಒಳ್ಳೆಯ ಶಿಕ್ಷಣ ಒದಗಿಸಬೇಕು ಎಂಬ ಉದ್ದೇಶದಿಂದ ನಮ್ಮ ಶಾಲೆ ನನ್ನ ಕೊಡುಗೆ ಯೋಜನೆ ಮೂಲಕ ಹಣದ ಸಹಾಯ ಅಥವಾ ಪುಸ್ತಕ, ಮೇಜು ಹೀಗೆ ಏನನ್ನಾದರೂ ಕೊಡಬಹುದು ಎಂದರು.

ಇದನ್ನೂ ಓದಿ:ಅಪ್ಪು ಮೇಲಿನ ಅಭಿಮಾನ: ಹುಬ್ಬಳ್ಳಿಯಿಂದ ಪಾದಯಾತ್ರೆ ಆರಂಭಿಸಿದ ಅಭಿಮಾನಿ

ABOUT THE AUTHOR

...view details