ಕರ್ನಾಟಕ

karnataka

ETV Bharat / city

ಎಪಿಎಂಸಿ ಮಾರುಕಟ್ಟೆ ಶುಲ್ಕ ಇಳಿಕೆ: ಸಿಎಂ ಬಿಎಸ್​ವೈಗೆ ಸನ್ಮಾನ - ಸಿ ಆರ್ ಜನಾರ್ಧನ್

ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಇಳಿಕೆ ಮಾಡಿದ್ದಕ್ಕಾಗಿ ಎಫ್​​.ಕೆ.ಸಿ.ಸಿ.ಐ ನಿಯೋಗವು ಸಿಎಂ ಯಡಿಯೂರಪ್ಪರನ್ನು ಸನ್ಮಾನಿಸಿದೆ.

FKCCI honours CM BSY
ಸಿಎಂ ಬಿಎಸ್​ವೈಗೆ ಸನ್ಮಾನ

By

Published : Jul 30, 2020, 5:18 PM IST

ಬೆಂಗಳೂರು: ಎಫ್​​.ಕೆ.ಸಿ.ಸಿ.ಐ (ಫೆಡರೇಷನ್‌ ಆಫ್‌ ಕರ್ನಾಟಕ ಚೇಂಬರ್ಸ್‌ ಆಫ್‌ ಕಾಮರ್ಸ್) ಅಧ್ಯಕ್ಷ ಸಿ.ಆರ್.ಜನಾರ್ಧನ್​​ರನ್ನೊಳಗೊಂಡ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿತು.

ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಶೇ. 0.35ಕ್ಕೆ ನಿಗದಿಗೊಳಿಸಿದ್ದಕ್ಕಾಗಿ ರಾಜ್ಯಾದ್ಯಂತ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವರ್ತಕರ ಪರವಾಗಿ ಯಡಿಯೂರಪ್ಪರನ್ನು ಸನ್ಮಾನಿಸಲಾಯಿತು.

ರಾಜ್ಯದ ಎಪಿಎಂಸಿ ವರ್ತಕರ ಬಹು ವರ್ಷಗಳ ಬೇಡಿಕೆಯಾದ ಮಾರುಕಟ್ಟೆ ಶುಲ್ಕವನ್ನು ಇಳಿಸಲು ಎಫ್.ಕೆ.ಸಿ.ಸಿ.ಐ ಮಾಡಿದ್ದ ಮನವಿಯನ್ನು ಸರ್ಕಾರವು ಪುರಸ್ಕರಿಸಿದ್ದು, ಇದರಿಂದ ರೈತರಿಗಷ್ಟೇ ಅಲ್ಲದೆ ಎಪಿಎಂಸಿ ವರ್ತಕರು ಹಾಗೂ ಎಪಿಎಂಸಿ ಪ್ರಾಂಗಣಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಿತದೃಷ್ಟಿಯನ್ನು ಕಾಪಾಡುವಲ್ಲಿ ಈ ನಿರ್ಧಾರ ಸೂಕ್ತವಾಗಿದೆ ಎಂದು ಜನಾರ್ಧನ್​​ ಹೇಳಿದರು.

ABOUT THE AUTHOR

...view details