ಬೆಂಗಳೂರು: ಇಲಿ ವಿಚಾರಕ್ಕೆ ಅಪಾರ್ಟ್ಮೆಂಟ್ ನಿವಾಸಿಗಳು ಜಟಾಪಟಿಗಿಳಿದು ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಾರಿನ ವೈರ್ಗಳನ್ನು ಇಲಿ ಕಚ್ಚಿದೆ ಎಂದು ಕಾರ್ ಮಾಲೀಕ ಲಕ್ಷ-ಲಕ್ಷ ಪರಿಹಾರಕ್ಕೆ ಬೇಡಿಕೆ ಇಟ್ಟು ರಂಪಾಟ ನಡೆಸಿದ್ದಾನೆ. ಪರಿಹಾರ ಕೊಡದ್ದಕ್ಕೆ ಅಪಾರ್ಟ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಿಗೆ ಬೆದರಿಕೆ ಹಾಕಿದ ಹಿನ್ನೆಲೆ ಬೇಸತ್ತು ಅಪಾರ್ಟ್ಮೆಂಟ್ ನಿವಾಸಿಗಳು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಬೆಂಗಳೂರಲ್ಲಿ ಇಲಿ ವಿಚಾರಕ್ಕೆ ಜಟಾಪಟಿ.. ಠಾಣೆ ಮೆಟ್ಟಿಲೇರಿದ ಅಪಾರ್ಟ್ಮೆಂಟ್ ನಿವಾಸಿಗಳು! - ಕಂಫರ್ಟ್ ಎನ್ ಕ್ಲೀವ್ ಅಪಾರ್ಟ್‌ಮೆಂಟ್ ಸಮಸ್ಯೆ
ಬೆಂಗಳೂರಿನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಅಪಾರ್ಟ್ಮೆಂಟ್ ನಿವಾಸಿಗಳು ಇಲಿ ವಿಚಾರಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ.
ಓದಿ:ಕಾರು ಅಪಘಾತಕ್ಕೆ ಕಾರಣವಾಯ್ತು 'ಇಲಿ'; ಮಗು ಸಾವು, ಮೂವರಿಗೆ ಗಾಯ
ಗಂಗಾನಗರದ ಕಂಫರ್ಟ್ ಎನ್ಕ್ಲೇವ್ ಅಪಾರ್ಟ್ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಅಪಾರ್ಟ್ಮೆಂಟ್ ಮುಂಭಾಗ ಕಸ ಸುರಿದ ಪರಿಣಾಮ ಕಾರಿನ ವೈರ್ಅನ್ನು ಇಲಿ ಕಚ್ಚಿದೆ ಎಂದು ಕಾರ್ ಮಾಲೀಕ ರಂಪಾಟ ಮಾಡಿದ್ದಾನೆ. ಕಾರ್ ಮಾಲೀಕನ ರಂಪಾಟಕ್ಕೆ ಬೇಸತ್ತು ಸದ್ಯ ಅಪಾರ್ಟ್ಮೆಂಟ್ ನಿವಾಸಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇವರ ಇನೋವಾ ಕಾರ್‌ನ ವೈಯರ್ ಇಲಿ ಕಚ್ಚಿ ತುಂಡರಿಸಿತ್ತು. ಇದರಿಂದ ಕಾರ್ ವೈರಿಂಗ್ ಮಾಡಿಸಲು ಪರಿಹಾರ ನೀಡುವಂತೆ ಮಾಲೀಕ ಡಿಮ್ಯಾಂಡ್ ಮಾಡಿ ಟಾರ್ಚರ್ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.