ಬೆಂಗಳೂರು:ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮತಾಂತರ ನಿಷೇಧ ವಿಧೇಯಕ ಇಂದು ವಿಧಾನಪರಿಷತ್ನಲ್ಲಿ ಮಂಡನೆಯಾಗಲಿದೆ. ಈ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಹೇಳಿದ್ದೇನು ನೋಡೋಣ.
"ವಿಧಾನಪರಿಷತ್ನಲ್ಲೂ ಈ ಮಸೂದೆ ಪಾಸ್ ಆಗಲಿದೆ. ಮತಾಂತರಕ್ಕೆ ಯಾರೂ ಬೆಂಬಲ ನೀಡಲ್ಲ. ಜೊತೆಗೆ ಯಾವುದೇ ಮಾಫಿಯಾಗೆ ನಾವು ಹೆದರುವುದಿಲ್ಲ" ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದರು.
ಬಿಜೆಪಿ ಎಂಎಲ್ಸಿ ಡಿ.ಎಸ್.ಅರುಣ್ ಪ್ರತಿಕ್ರಿಯಿಸಿ, "ಈ ಮಸೂದೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಸಬೇಕು. ವಿಧಾನಪರಿಷತ್ನಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಬೇಕು. ನಾವೆಲ್ಲರೂ ಉತ್ಸುಕರಾಗಿದ್ದು, ಮಸೂದೆ ಅಂಗೀಕಾರವಾಗಲಿದೆ" ಎಂದರು.