ಬೆಂಗಳೂರು: ನಗರದ ಬಿಬಿಎಂಪಿ ಶಾಲೆಗಳನ್ನು ಮೈಕ್ರೋ ಸಾಫ್ಟ್ ಕಂಪೆನಿಯ ಸಿಎಸ್ಆರ್ ಫಂಡ್ನಲ್ಲಿ ಹೈಟೆಕ್ ಮಾಡುತ್ತೇವೆ ಎಂದು ಹೇಳಿಕೊಂಡು ಬಂದಿದ್ದ ರೋಶಿನಿ ಯೋಜನೆಯ ಸತ್ಯಾಸತ್ಯತೆಯ ಬಗ್ಗೆ ಈಟಿವಿ ಭಾರತ ಈ ಹಿಂದೆ ವರದಿ ಪ್ರಕಟಿಸಿತ್ತು. ಇದೀಗ ಈ ಯೋಜನೆಯ ಹೆಸರಲ್ಲಿ ನಡೆದ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.
17.86 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಶೈಕ್ಷಣಿಕ ಸಾಧನಗಳನ್ನು ಪಾಲಿಕೆ ಶಾಲಾ ಮಕ್ಕಳಿಗೆ ನೀಡಲಾಗಿದೆ ಎಂಬ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 16.29 ಕೋಟಿ ಮೌಲ್ಯದ 154 ಮೈಕ್ರೋ ಸಾಫ್ಟ್ ಕಿಟ್ ಹಸ್ತಾಂತರಿಸಿರುವುದಾಗಿ ರೋಶಿನಿ ಯೋಜನೆ ನಿರ್ವಾಹಕರಾಗಿದ್ದ ಅಲಿ ಸೇಠ್ ಹೇಳಿಕೊಂಡಿದ್ದಾರೆ.