ಕರ್ನಾಟಕ

karnataka

ETV Bharat / city

ಯೂತ್ ಕಾಂಗ್ರೆಸ್ ಸಭೆಯಲ್ಲಿ ನಡೆಯಿತೇ ಮಾರಾಮಾರಿ? ನಲಪಾಡ್ ವಿರುದ್ಧ ಮತ್ತೊಂದು ಕೇಸ್!? - ಯೂತ್ ಕಾಂಗ್ರೆಸ್ ಸಭೆಯಲ್ಲಿ ಮಾರಾಮಾರಿ

ತನ್ನ ಮೇಲಿನ ಆರೋಪವನ್ನು ಅಲ್ಲಗೆಳೆದಿರುವ ನಲಪಾಡ್, ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದೆವು. ಗೌತಮ್​​ನನ್ನು ವೇದಿಕೆಗೆ ಕರೆದಿಲ್ಲ ಎಂದು ಸಚಿನ್​​ ಕಿರಿಕ್ ಮಾಡಿದ್ರು. ಆಗ ಮಧ್ಯಪ್ರವೇಶಿಸಿದ್ದಕ್ಕೆ ನಿನಗೂ ಇದಕ್ಕೂ ಸಂಬಂಧವಿಲ್ಲ ಎಂದು ನನ್ನ ಮೇಲೆ ಗಲಾಟೆ ಮಾಡಿದ್ರು ಎಂದು ಸಚಿನ್ ವಿರುದ್ಧ ವೈಯ್ಯಾಲಿಕಾವಲ್ ಠಾಣೆಗೆ ಪ್ರತಿದೂರು ದಾಖಲಿಸಿದ್ದಾರೆ

Another case registered on Nalapad
ಸಚಿನ್​ಗೌಡ

By

Published : Mar 16, 2020, 10:14 PM IST

ಬೆಂಗಳೂರು:ಕೆಲದಿನಗಳ ಹಿಂದಷ್ಟೇಮೇಖ್ರಿ ಸರ್ಕಲ್ ಬಳಿ ಮೊಹಮ್ಮದ್​ ನಲಪಾಡ್ ಅವರು ಅಪಘಾತ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಅವರ ಮೇಲೆ ದಾಖಲಾಗಿದೆ.

ಘಟನೆ ಏನು?ಭಾನುವಾರ (ಮಾರ್ಚ್​ 15) ವೈಯ್ಯಾಲಿಕಾವಲ್ ತೆಲುಗು ಭವನದಲ್ಲಿ ಕಾಂಗ್ರೆಸ್​​ ಕಾರ್ಯಕರ್ತರಿಗೆ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಶಾಸಕ ಬಿ.ನಾರಾಯಣ ರಾವ್​ ಪುತ್ರ, ಶಾಸಕ ಎನ್​.ಎ.ಹ್ಯಾರಿಸ್​​ ಪುತ್ರ ನಲಪಾಡ್​​ ಸೇರಿದಂತೆ ಯೂತ್ ಕಾಂಗ್ರೆಸ್ ಕಾರ್ಯಕರ್ತರಿದ್ದರು.

ಈ ಸಂದರ್ಭದಲ್ಲಿ ಬಸವಕಲ್ಯಾಣ ಶಾಸಕನ ಪುತ್ರ ಗೌತಮ್​ಗೆ ವೇದಿಕೆ ಮೇಲೆ ಅವಕಾಶ ನೀಡಲಿಲ್ಲವಂತೆ. ಇದನ್ನ ಕಾರ್ಯಕರ್ತ ಸಚಿನ್ ಗೌಡ ಅವರು ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಆಗ ಇದನ್ನೆಲ್ಲ ಪ್ರಶ್ನಿಸಲು ನೀನ್ಯಾರು ಎಂದು ಶಿವಕುಮಾರ್, ಸಚಿನ್​​ಗೆ ಅವಾಜ್ ಹಾಕಿದ್ದಾರೆ. ಅಲ್ಲಿದ್ದ ನಲಪಾಡ್ ಹಾಗೂ ಆತನ ಗನ್​​​ಮ್ಯಾನ್ ಏಕಾಏಕಿ ಸಚಿನ್ ಮೇಲೆ ಹಲ್ಲೆಗೆ ಮುಂದಾದ್ರು ಎಂದು ಸಚಿನ್​ ದೂರಿನಲ್ಲಿ ತಿಳಿಸಿದ್ದಾರೆ. ನಿನಗೂ ಇದಕ್ಕೂ ಸಂಬಂಧವಿಲ್ಲ ಎಂದು ಸಚಿನ್​ ನನ್ನ ಮೇಲೆ ಜಗಳ ಕ್ಯಾತೆ ತೆಗೆದರು ಎಂದು ನಲಪಾಡ್ ಪ್ರತಿದೂರು ದಾಖಲಿಸಿದ್ದಾರೆ.

ಸದ್ಯ ನಲಪಾಡ್ ಹಾಗೂ ಸಚಿನ್ ವಿರುದ್ಧ ವೈಯ್ಯಾಲಿಕಾವಲ್ ಪೊಲೀಸ್​ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಹಲ್ಲೆ ಮಾಡಿ ಪುಂಡಾಟ ಮೆರೆದಿರುವುದು ಯಾರು ಎಂಬುದು ಪೊಲೀಸರ ವಿಚಾರಣೆಯಿಂದ ಹೊರಬರಬೇಕಿದೆ.

ABOUT THE AUTHOR

...view details