ಬೆಂಗಳೂರು: ನಗರದಲ್ಲಿ ಕೊರೊನಾ ವಾರಿಯರ್ ಆಗಿ ದುಡಿದಿದ್ದ, ಅಂಗನವಾಡಿ ಕಾರ್ಯಕರ್ತೆ ರಾಧಾ ಎಂಬುವರು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಜುಲೈ 26 ರಂದು ಕೋವಿಡ್ಗೆ ಬಲಿಯಾಗಿದ್ದಾರೆ.
ಸರ್ಕಾರ ಕೋವಿಡ್ಗೆ ಬಲಿಯಾದ ಕೊರೊನಾ ವಾರಿಯರ್ಸ್ಗೆ ಘೋಷಣೆ ಮಾಡಿರುವ 30 ಲಕ್ಷ ಪರಿಹಾರವನ್ನು ಕೂಡಲೇ ಕೊಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ಆಗ್ರಹಿಸಿದ್ದಾರೆ.
ಈಗಾಗಲೇ ಕೋವಿಡ್ನಿಂದ ಬೆಂಗಳೂರು ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಕಾರ್ಯಕರ್ತೆಯರು ಸಾವನ್ನಪ್ಪಿದ್ದಾರೆ. ಈಗ ಕಾರ್ಯಕರ್ತೆಯರು ಪ್ರತಿನಿತ್ಯ ಹೋಂ ಐಸೋಲೇಷನ್ನಲ್ಲಿರುವವರ ಪಲ್ಸ್ ರೇಟ್ ನೋಡುವುದು, ಟೆಂಪರೇಚರ್, ಹೆಲ್ತ್ ಚೆಕಪ್ ಮಾಡಬೇಕೆಂದು ಹೇಳುತ್ತಿದ್ದಾರೆ.
ಆದರೆ ಆರೋಗ್ಯ ತರಬೇತಿ ಇಲ್ಲದೆ ಇರುವುದರಿಂದ ಈ ಯೋಚನೆ ಕೈಬಿಡಬೇಕೆಂದು ಸಂಘ ಆಗ್ರಹಿಸಿದೆ. ಅಲ್ಲದೆ ಅಂಗನಾಡಿ ಕಾರಯಕರ್ತೆಯರಿಗೆ ಸರ್ವಿಸ್ ಆಧಾರದಲ್ಲಿ ಸಂಬಳ ಹೆಚ್ಚಳ, ವೈದ್ಯಕೀಯ ಸೌಲಭ್ಯ ಹಾಗೂ ಪ್ರೋತ್ಸಾಹ ಧನ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.