ಆನೇಕಲ್:ಹೆಂಡತಿಯ ಶೀಲದ ಮೇಲೆ ಅನುಮಾನಗೊಂಡ ಪತಿಯೊಬ್ಬ ಆಕೆಯನ್ನು ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ತಿಮ್ಮರಾಯಸ್ವಾಮಿ ದೇವಾಲಯ ರಸ್ತೆಯ ಮಲ್ಲೇಶ್(35) ಎಂಬಾತ ಪತ್ನಿ ಸರಸ್ವತಿ (33)ಯನ್ನು ಕೊಲೆ ಮಾಡಿದ್ದಾನೆ. ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಪತ್ನಿಯ ಅಶ್ಲೀಲ ವಿಡಿಯೋ.. ಮೈದುನನ ಮೇಲೆ ಅನುಮಾನ: ಹೆಂಡತಿ ಕೊಂದು ಶರಣಾದ ಗಂಡ - Anekal: husband who killd ihis wife for Pornography video Doubt
ಅಶ್ಲೀಲ ವಿಡಿಯೋ ವಿಚಾರವಾಗಿ ಪತಿ-ಪತ್ನಿ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ಪತಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಆನೇಕಲ್: ಪತ್ನಿಯ ಮೇಲೆ ಶಂಕೆ, ಕತ್ತು ಕುಯ್ದು ಕೊಲೆಗೈದ ಗಂಡ
ತಡರಾತ್ರಿ ಪತ್ನಿಯ ಅಶ್ಲೀಲ ವಿಡಿಯೋವನ್ನು ಮೈದುನ ತೆಗೆದಿದ್ದಾನೆಂದು ಆರೋಪಿಸಿ ಗಲಾಟೆ ನಡೆದಿದೆ. ಇದನ್ನು ಪತ್ನಿ ಅಲ್ಲಗಳೆದು ಎಷ್ಟೇ ತಿಳಿಹೇಳಿದರೂ ಕೇಳದೇ ವೇಲ್ನಿಂದ ಕತ್ತಿಗೆ ಸುತ್ತಿ, ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ನಂತರ ಬೆಳಗ್ಗೆ ಆನೇಕಲ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಇದನ್ನೂ ಓದಿ:ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು, ಹೊತ್ತಿ ಉರಿದ ಬೈಕ್
Last Updated : Apr 19, 2022, 3:47 PM IST