ಆನೇಕಲ್: ಆನೇಕಲ್ ದಸರಾ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಕೋವಿಡ್ ಹಿನ್ನೆಲೆ, ಕಳೆದ ವರ್ಷ ಆಚರಣೆ ಸಾಧ್ಯವಾಗಿರಲಿಲ್ಲ. ಈ ಬಾರಿಯ ಆನೇಕಲ್ ದಸರಾ ಆಚರಣೆಗೆ ಕಾತರದಿಂದ ಕಾಯುತ್ತಿದ್ದ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಆನೇಕಲ್ ಪಟ್ಟಣಕ್ಕೆ ಬಂದು ಉತ್ಸವದಲ್ಲಿ ಪಾಲ್ಗೊಂಡರು.
ವಿಭಿನ್ನ ಜಾನಪದ ಕಲಾ ತಂಡಗಳ ನೃತ್ಯ ವೈಭವ, ಆನೇಕಲ್ನ ಆರಾಧ್ಯ ದೈವ ಚೌಡೇಶ್ವರಿ ದೇವಿಯನ್ನು ಹೊತ್ತ ಕರಿ ಬಸವ ಮಠದ ಧ್ರುವ ಆನೆ ಕಂಡು ಜನರು ಸಂಭ್ರಮಪಟ್ಟರು.